ಮಡಿಕೇರಿ, ಡಿ. ೯: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸಂಪಾಜೆ ಸ್ಥಳೀಯ ಸಂಸ್ಥೆ ವತಿಯಿಂದ ಮಕ್ಕಳ ಮೇಳ ಸ.ಪ್ರಾ.ಶಾಲೆ. ಚೆಂಬುವಿನಲ್ಲಿ ನೆರವೇರಿತು.

ಮೇಳದ ಪಥ ಸಂಚಲನಕ್ಕೆ ಚೆಂಬು ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲ, ಅತಿಥಿಗಳಾದ ಹೊಸೂರು ರಾಧಕೃಷ್ಣ, ಭಾರತಿ ಟಿ.ಟಿ.ರವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಬಾಲಂಬಿ ಗ್ರಾ.ಪಂ.ವರೆಗೆ ಮಕ್ಕಳು ಬ್ಯಾಂಡ್‌ಸೆಟ್‌ನೊAದಿಗೆ ಪಥ ಸಂಚಲನ ನಡೆಸಿದರು.

ಕಾರ್ಯಕ್ರಮದಲ್ಲಿ ಯೂತ್ ರೆಡ್‌ಕ್ರಾಸ್ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಶಿಬಿರಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಡಾ. ಪುರುಷೋತ್ತಮ್, ಡಾ. ಕೇದಾರನಾಥ್, ಡಾ. ಧ್ಯಾನ್ ಕುಶಾಲಪ್ಪ, ವೈ.ಆರ್.ಸಿ. ನಾಯಕಿ ಅನುಶ್ರೀ ವೈ ನಾಯಕ್, ವೈದ್ಯ ವಿಜ್ಞಾನದ ವಿದ್ಯಾರ್ಥಿಗಳು, ಕಾರ್ಯದರ್ಶಿ ದೇವ ಸಿ., ಯೂತ್ ರೆಡ್‌ಕ್ರಾಸ್‌ನ ಅಧ್ಯಕ್ಷ ಎಂ. ಧನಂಜಯ ಅವರು ಉಪಸ್ಥಿತರಿದ್ದರು.

ಮಕ್ಕಳ ಮೇಳವನ್ನು ಲೀಲಾವತಿ ಜಯಪ್ರಕಾಶ್ ಊರುಬೈಲು, ಪಾರ್ವತಿ ತೇಜೇಶ್ವರ ಪ್ರಸಾದ್, ಪುಷ್ಪಲತ ವಿಶ್ವನಾಥ್, ಸುಮಿತ್ರ ನಿಡಂಜಿ ಜ್ಯೋತಿ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಭಾ.ಸ್ಕೌ. ಮತ್ತು ಗೈ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ, ಯಮುನಾ, ಹಿರಿಯ ಶಿಕ್ಷಕಿ, ಗ್ರಾ.ಪಂ. ಅಧ್ಯಕ್ಷೆ ಕುಸುಮ ಯೋಗೇಶ್ವರ್, ರಾಣಿ ಮಾಚಯ್ಯ, ನವೀನ್ ರಾಮಕಜೆ, ಖಜಾಂಚಿ ಗಂಗಮ್ಮ ಬಿ.ಕೆ., ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ಕುಮಾರ್, ಶಿಬಿರದ ನಾಯಕ ರಂಜಿತ್ ಕೆ.ಯು., ಲಾಲಿ ಪಿ.ಜೆ., ರವಿಕುಮಾರ್ ಪೂಜಾರ್, ಸರಿತ ಕೆ.ಕೆ. ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಧನಂಜಯ ಎಂ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಷಾರಾಣಿ ಕೆ.ಬಿ. ನಿರೂಪಿಸಿದರು, ರಂಜಿತ್ ವಂದಿಸಿದರು.