ತನಿಖಾ ವರದಿ: ಚಂದ್ರಮೋಹನ್

ಕುಶಾಲನಗರ, ಡಿ.೮: ಕುಶಾಲನಗರ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಕಾಮಗಾರಿ ಹೆಸರಿನಲ್ಲಿ ಲಕ್ಷಾಂತರ ರೂ. ಗಳ ಸರ್ಕಾರಿ ಹಣವನ್ನು ದುರುಪಯೋಗ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿ ಮೂಲಕ ಅವ್ಯವಹಾರ ನಡೆಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿಗಳು ಕೆಲವು ಜನಪ್ರತಿನಿಧಿಗಳೊಂದಿಗೆ ಶಾಮಿಲಾಗಿ ಇತರ ಇಲಾಖೆಗಳಿಗೆ ಸಂಬAಧಿಸಿದ ಕಾಮಗಾರಿ ಹೆಸರಿನಲ್ಲಿ ಲಕ್ಷಗಟ್ಟಲೇ ಹಣ ಲೂಟಿ ಮಾಡುತ್ತಿರುವುದು ದಾಖಲೆಗಳ ಮೂಲಕ ಖಚಿತಗೊಂಡಿದೆ.

ಕುಶಾಲನಗರ ತಾಲೂಕು ಕೂಡಿಗೆ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಅಂದಾಜು ೯೦ ಲಕ್ಷದ ಕ್ರಿಯಾಯೋಜನೆಯೊಂದನ್ನು ರೂಪಿಸಿದ್ದು, ೨೦೨೨-೨೩ ನೆ ಸಾಲಿಗೆ ಹಲವು ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದ ಹಣ ಲೂಟಿ ಮಾಡುತ್ತಿರುವ ಬಗ್ಗೆ ಗ್ರಾಮಗಳ ನಾಗರಿಕರು ದಾಖಲೆಗಳ ಸಹಿತ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಕಕ್ಕೆಹೊಳೆ ನಾಲೆಯಿಂದ ಹೂಳೆತ್ತಿ ಅಭಿವೃದ್ಧಿ ಪಡಿಸುವ ಕಾಮಗಾರಿ ಹೆಸರಿನಲ್ಲಿ ಅಂದಾಜು ವೆಚ್ಚ ೮ ಲಕ್ಷ ರೂ. ಗಳ ಕೆಲಸ ಹಿಟಾಚಿ ಯಂತ್ರ ಬಳಸಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿಬಂದು ‘ಶಕ್ತಿ’ ಸ್ಥಳಕ್ಕೆ ಭೇಟಿ ನೀಡಿದಾಗ ಹಲವು ಸಂಶಯಗಳು ಕಂಡುಬAದಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರು ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಸಮರ್ಪಕ ಉತ್ತರ ನೀಡದೆ ಇರುವ ಹಿನ್ನೆಲೆಯಲ್ಲಿ ಸಂಶಯಗೊAಡ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಈ ಕಾಮಗಾರಿ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಭುವನಗಿರಿ ಕಕ್ಕೆಹೊಳೆ ನಾಲೆ ನಿರ್ವಹಣೆ ಕಾಮಗಾರಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಇಲಾಖೆಯಿಂದಲೇ ನಡೆದಿದ್ದು, ನಿಯಮಬಾಹಿರವಾಗಿ ಈ ಕಾಮಗಾರಿಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ ಎನ್ನುವುದು ಭುವನಗಿರಿ ಗ್ರಾಮಸ್ಥರಾದ ನಂಜುAಡಸ್ವಾಮಿ, ಅಪ್ಪಾಜಿ, ದೊಡ್ಡಯ್ಯ ಮತ್ತಿತರ ಗ್ರಾಮಸ್ಥರ ಆರೋಪವಾಗಿದೆ.

ಸುಮಾರು ೫೦೦ ಎಕರೆ ನೀರು ಒದಗಿಸುವ ಈ ನಾಲೆ ಸೀಗೆಹೊಸುರು, ಭುವನಗಿರಿ, ಹೆಗ್ಗಡಹಳ್ಳಿ, ಮಲ್ಲೆನಹಳ್ಳಿ ವ್ಯಾಪ್ತಿಯ ರೈತರ ಜಮೀನಿಗೆ ನೀರು ಹರಿಯದೆ ವರ್ಷಗಳೆ ಕಳೆದಿದೆ. ಪ್ರತಿವರ್ಷ ಹೂಳೆತ್ತುವ ಹೆಸರಿನಲ್ಲಿ ಸರ್ಕಾರಿ ಹಣ ದುರುಪಯೋಗವಾಗುತ್ತಿರುವುದು ದಾಖಲೆಗಳಲ್ಲಿ ಕಾಣಬಹುದು. ಪ್ರಸಕ್ತ ಕೂಡಿಗೆ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಕೆಲವರು ಸೇರಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಹಿಟಾಚಿ ಯಂತ್ರ ಬಳಸಿ ಕೆಲಸ ಮಾಡುತ್ತಿರುವ ಬಗ್ಗೆ ಸಂಬAಧಿಸಿದ ಸಣ್ಣ ನೀರಾವರಿ ಯೋಜನೆ ಅಧಿಕಾರಿಗಳಿಗೆ ಸಂಪರ್ಕಿಸಿದರೆ ತಮ್ಮ ಗಮನಕ್ಕೆ ಬಾರದೆ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಸುರೇಶ್ ಅವರ ಬಳಿ ಸ್ಪಷ್ಟನೆ ಬಯಸಿದಾಗ ಅವರು ಹೇಳಿದ್ದಿಷ್ಟು- ತಮ್ಮ ಇಲಾಖೆಗೆ ಸಂಬAಧಿಸಿದ ಕಕ್ಕೆಹೊಳೆ ನಾಲೆ ಕಾಮಗಾರಿ ನಡೆಸುವ ಸಂದರ್ಭ ಪಂಚಾಯಿತಿ ಅಧಿಕಾರಿಗಳು ಗಮನಕ್ಕೆ ತಂದಿಲ,್ಲ ನಿಯಮಬಾಹಿರವಾಗಿ ಕಾಮಗಾರಿ ನಡೆಸುತ್ತಿದ್ದು, ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯಿತಿ ಅಧ್ಯಕ್ಷರ ಮತ್ತು ಕೆಲವು ಸದಸ್ಯರ ಗಮನಕ್ಕೆ ತಾರದೆ ತಮ್ಮಿಷ್ಟದಂತೆ ಈ ಕಾಮಗಾರಿ ನಡೆದಿದ್ದು, ಪಂಚಾಯಿತಿ ಅಧ್ಯಕ್ಷೆ ಮಂಗಳ ಪ್ರಕಾಶ್ ಮಾಹಿತಿ ನೀಡಿದ್ದಾರೆ. ಅಭಿವೃದ್ಧಿ ಅಧಿಕಾರಿ ಮತ್ತು ಕೆಲವರು ಸೇರಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ತಮಗೆ ಮಾಹಿತಿ ಬಂದಿರುವುದಾಗಿ ಅವರು ಹೇಳಿದ್ದಾರೆ. ಅಧಿಕಾರಿ ತನ್ನ ಮೇಲೆ ದಬ್ಬಾಳಿಕೆ ನಡೆಸಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡಿರುವ ಬಗ್ಗೆ ಆರೋಪ ವ್ಯಕ್ತಪಡಿಸಿದ್ದಾರೆ. ಕೂಲಿ ಕಾರ್ಮಿಕರನ್ನು ಬಳಸಿ ನಿರ್ವಹಿಸಬೇಕಾದ ಕಾಮಗಾರಿಯನ್ನು ಹಿಟಾಚಿ ಯಂತ್ರ ಬಳಸಿ ಕೆಲಸ ನಿರ್ವಹಿಸುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಯಂತ್ರ ಬಳಸಿ ಇರುವ ಕಾಲುವೆಯನ್ನು ಹಾನಿಮಾಡಿರುವ ದೃಶ್ಯಗಳು ಕೂಡ ಕಂಡುಬAದಿದೆ. ಕಾಲುವೆಯಿಂದ ಹಿಟಾಚಿ ಮೂಲಕ ತೆಗೆದ ಮಣ್ಣನ್ನು ಮಾರಾಟ ಮಾಡಿರುವುದಾಗಿ ಆರೋಪ ವ್ಯಕ್ತಪಡಿಸಿರುವ ಸ್ಥಳೀಯ ಗ್ರಾಮಸ್ಥರು, ಯಾವುದೇ ಸಾಮಾಗ್ರಿಗಳ ಅವಶ್ಯಕತೆ ಇಲ್ಲದಿದ್ದರೂ ಸಿಮೆಂಟ್, ಜೆಲ್ಲಿ, ಸ್ಟೀಲ್ ಮತ್ತಿತರ ಸಾಮಾಗ್ರಿ ಬಳಸಿದ ಬಗ್ಗೆಯೂ ದಾಖಲೆ ಸೃಷ್ಟಿಸಿರುವುದಾಗಿ ತಿಳಿಸಿದ್ದಾರೆ.

ಸೀಗೆಹೊಸೂರಿನಿಂದ ಹುಲುಸೆ ಗ್ರಾಮದ ತನಕ ಜನರಿಗೆ ಅಗತ್ಯವಿರುವ ರಸ್ತೆ ಮತ್ತಿತರ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಅದರ ಹೊರತಾಗಿ ಸಂಬAಧಿಸಿದ ಇಲಾಖೆಗಳು ಮಾಡಬೇಕಾದ ಕಾಮಗಾರಿಗಳನ್ನು ಪಂಚಾಯಿತಿ ಮೂಲಕ ಮಾಡಿ ಹಣ ದುರುಪಯೋಗ ಮಾಡುತ್ತಿರುವ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪಂಚಾಯಿತಿ ಸದಸ್ಯರಾದ ಜಯಶೀಲ ಆಗ್ರಹಿಸಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೨ ವರ್ಷಗಳಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗ್ರಾಮದ ಹಿರಿಯರಾದ ನಂಜುAಡಸ್ವಾಮಿ ಮತ್ತು ಇತರರು ತಿಳಿಸಿದ್ದಾರೆ. ಸರ್ಕಾರದ ಹಲವು ಯೋಜನೆ ಹೆಸರಿನಲ್ಲಿ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸರ್ಕಾರದ ಹಣ ಪೋಲಾಗದಂತೆ ಎಚ್ಚರವಹಿಸಬೇಕಾಗಿದೆ.