ಸೋಮವಾರಪೇಟೆ: ಧಾನ್ಯಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮದ ಪ್ರತೀಕವಾಗಿರುವ ಹುತ್ತರಿ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಡಗರದಿಂದ ಆಚರಿಸಲಾಯಿತು.

ಭತ್ತದ ಗದ್ದೆಗೆ ಗ್ರಾಮಸ್ಥರು ಸಾಮೂಹಿಕವಾಗಿ ತೆರಳಿ ಪೈರಿಗೆ ವಿಶೇಷ ಪೂಜೆ ಸಲ್ಲಿಸಿ ಕದಿರನ್ನು ಮನೆಗೆ ತರಲಾಯಿತು.

ಇಲ್ಲಿನ ಕೊಡವ ಸಮಾಜದ ವತಿಯಿಂದ ನಡೆದ ಹುತ್ತರಿ ಹಬ್ಬಾಚರಣೆಯಲ್ಲಿ ಸಮಾಜ ಬಾಂಧವರು ಸಮಾಜದಲ್ಲಿ ಪೂಜೆ ಸಲ್ಲಿಸಿದ ನಂತರ ಆಂಜನೇಯ ದೇವಾಲಯದ ಬಳಿಯಿರುವ ಗದ್ದೆಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕದಿರನ್ನು ಕೊಡವ ಸಮಾಜಕ್ಕೆ ತಂದು ಪೂಜೆ ಸಲ್ಲಿಸಿ ಸಮುದಾಯದವರು ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು. ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಉಪಾಧ್ಯಕ್ಷ ಬೊಳಂದAಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್, ಆಪಾಡಂಡ ದರ್ಶನ್, ವೀರಾರಾಜು ಸೇರಿದಂತೆ ಇತರರು ಇದ್ದರು.

ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥಸ್ವಾಮಿ ದೇವಾಲಯದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಹುತ್ತರಿ ಹಬ್ಬವನ್ನು ಆಚರಿಸಿದರು. ದೇವಾಲಯದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್ ನಾಥ್ ಜೀ ಅವರು ಸಾರ್ವಜನಿಕರಿಗೆ ಕದಿರು ವಿತರಿಸಿದರು. ಪ್ರಧಾನ ಅರ್ಚಕ ಜಗದೀಶ್ ಉಡುಪ, ಅರ್ಚಕ ವಾದಿರಾಜ್ ಭಟ್ ಅವರ ಪೌರೋಹಿತ್ವದಲ್ಲಿ ವಿಶೇಷ ಪೂಜೆಗಳು ನಡೆದವು. ಪಟ್ಟಣದ ಅರೆಭಾಷೆ ಗೌಡ ಸಮಾಜದ ವತಿಯಿಂದ ಕುದುಕುಳಿ ಬೋಜರಾಜ್ ಅವರ ಮನೆಯಲ್ಲಿ ಹುತ್ತರಿ ಆಚರಣೆ ನಡೆಯಿತು. ಸಮಾಜದ ಅಧ್ಯಕ್ಷ ದಂಡಿನ ಉತ್ತಯ್ಯ, ಚಂಗಪ್ಪ, ಪ್ರವೀಣ್, ಗಿರೀಶ್, ಚಂದ್ರಕುಮಾರ್ ಸೇರಿದಂತೆ ಇತರರು ಇದ್ದರು.

ಸಮೀಪದ ಅರೆಯೂರು ಗ್ರಾಮದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಹಬ್ಬಾಚರಣೆ ಮಾಡಿದರು. ಗ್ರಾಮದ ಅಧ್ಯಕ್ಷರಾದ ಕೆ.ಪಿ. ಸುರೇಶ್ , ಉಪಾಧ್ಯಕ್ಷ ಅರುಣ, ಖಜಾಂಜಿ ಮುತ್ತಪ್ಪ, ಕಾರ್ಯದರ್ಶಿ ನವೀನ್ ಕುಮಾರ್, ಹಿರಿಯರಾದ ಸಿ.ಎ. ಪೂವಯ್ಯ ಸೇರಿದಂತೆ ಗ್ರಾಮಸ್ಥರು ಗದ್ದೆಗೆ ತೆರಳಿ ಪೂಜೆ ಸಲ್ಲಿಸಿದ ನಂತರ ದೇವಾಲಯದಲ್ಲಿ ಕದಿರು ವಿತರಿಸಲಾಯಿತು. ತಾಕೇರಿ, ಕಿರಗಂದೂರು, ಗರ್ವಾಲೆ, ಹರಗ, ಸೂರ್ಲಬ್ಬಿ ವ್ಯಾಪ್ತಿಯಲ್ಲೂ ಸಂಭ್ರಮ ಸಡಗರದಿಂದ ಹುತ್ತರಿ ಹಬ್ಬವನ್ನು ಆಚರಿಸಿ ಧಾನ್ಯ ಲಕ್ಷಿö್ಮÃಯನ್ನು ಮನೆಗೆ ಬರಮಾಡಿಕೊಳ್ಳಲಾಯಿತು.

ವರದಿ: ದುಗ್ಗಳ, ಸಿಂಚು, ವಿಜಯ್, ಸುನಿಲ್, ಅಶ್ರಫ್, ಕರುಣ್, ಹರೀಶ್ ಮಾದಪ್ಪ