ಮಡಿಕೇರಿ, ಡಿ. ೮: ಕಡಗದಾಳು ನಿವಾಸಿ, ಜಾರ್ಖಂಡ್‌ನ ರಾಂಚಿಯಲ್ಲಿ ಕಾರ್ಯನಿರ್ವಹಿ ಸುತ್ತಿದ್ದ ಸಿ.ಐ.ಎಸ್.ಎಫ್ (ಸೆಂಟ್ರಲ್ ಇಂಡಸ್ಟಿçಯಲ್ ಸೆಕ್ಯುರಿಟಿ ಫೋರ್ಸ್)ನ ಯೋಧ ಕೆ.ಕೆ ಶಿಜು(೪೮) ಅವರು ಹೃದಯಾ ಘಾತದಿಂದ ಮೃತರಾದರು. ಯೋಧ ಶಿಜು ಅವರಿಗೆ ತಾ. ೮ ರಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಹೃದಯಾಘಾತ ಸಂಭವಿಸಿದ್ದು, ರಾಂಚಿಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಶಿಜು ಅವರ ಮೃತದೇಹ ರಾಂಚಿಯಿAದ ತಾ.೯ ರಂದು (ಇಂದು) ಸಂಜೆ ಸ್ವಗ್ರಾಮ ಕಡಗದಾಳಿಗೆ ಬರಲಿದ್ದು, ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಶಿಜು ಕೆ.ಕೆ ಅವರು ಕಳೆದ ೨೩ ವರ್ಷಗಳಿಂದ ಸಿ.ಐ.ಎಸ್.ಎಫ್.ನಲ್ಲಿ ಸೇವೆಯಲ್ಲಿದ್ದರು. ಅವರ ಪತ್ನಿ ಪ್ರಶಿತ ಮೂಲತಃ ಕೇರಳದ ಇರಿಟ್ಟಿಯವರಾಗಿದ್ದು, ಪ್ರಸ್ತುತ ಇಬ್ಬರು ಪುತ್ರಿಯರ ವಿದ್ಯಾಭ್ಯಾಸದ ನಿಟ್ಟಿನಲ್ಲಿ ಕಣ್ಣನೂರಿನಲ್ಲಿ ನೆಲೆಸಿದ್ದಾರೆ. ಹಿರಿಯ ಪುತ್ರಿ ಶಿವೆಂದು ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಕಿರಿಯ ಪುತ್ರಿ ಶಿವಾಂಗಿ ಪ್ರಥಮ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.