ಪಾಲಿಬೆಟ್ಟ, ಡಿ. ೮: ಬೆಂಗಳೂರಿನ ಖಾಸಗಿ ಅಂಗಡಿಯೊAದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪಾಲಿಬೆಟ್ಟದ ಹಮೀದ್ ಎಂಬವರ ಪುತ್ರ ಆದಿಲ್ (೨೪) ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಕೇರಳ ಮಲಪುರಂ ಜಿಲ್ಲೆಯ ಮನ್ನಾರ್ ಕಾಡ್ ಗ್ರಾಮದ ಸಮಿಉಲ್ಲಾ (೨೭) ಆತನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಆದಿಲ್ ಹಾಗೂ ಸಮಿಉಲ್ಲ ಇಬ್ಬರು ಒಂದೇ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ ಬೆಂಗಳೂರು ಕಾಮಾಕ್ಷಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಪಾಲಿಬೆಟ್ಟಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.