ಮಡಿಕೇರಿ, ಡಿ. ೬: ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ಆನ್‌ಲೈನ್ ಮೂಲಕ ನಿಗದಿತ ಹಣ ಸಂದಾಯ ಮಾಡುವಾಗ ಅದಕ್ಕೆ ಸೂಕ್ತ ರಶೀತಿಯನ್ನು ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. ಈ ಕುರಿತು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರಿಗೆ ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ ಅವರು ಮನವಿ ಪತ್ರ ರವಾನಿಸಿ ಆಗ್ರಹಿಸಿದ್ದಾರೆ.

ಸರಕಾರ ಪ್ರತಿಯೊಂದನ್ನು ಆನ್‌ಲೈನ್ ಮೂಲಕ ಸರಕಾರದ ಸಂಭಾವನೆ (ಫೀಜು)ಗಳನ್ನು ಸಂದಾಯ ಮಾಡಲು ವ್ಯವಸ್ಥೆ ಮಾಡಿದರೂ ಸಹ ಸರಕಾರದ ಅಧಿಕಾರಿಗಳು ಮತ್ತು ಖಾಸಗಿ ಉದ್ಯಮದವರು ಶಾಮೀಲಾಗಿ ಜನರನ್ನು ಶೋಷಣೆ ಮಾಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.

ಒಬ್ಬ ವ್ಯಕ್ತಿಯ ಡ್ರೆöÊವಿಂಗ್ ಲೈಸನ್ಸ್ ಅನ್ನು ನವೀಕರಣಗೊಳಿಸಬೇಕಾದರೆ ರೂ. ೨೦೦೦ಗಳನ್ನು ಆರ್‌ಟಿಓರವರಿಗೆ ರೂ. ೧೦೦೦ ಕೊಡಬೇಕು. ಆನ್‌ಲೈನ್ ಚಾರ್ಜು ರೂ. ೩೫೦, ಆನ್‌ಲೈನ್ ಪೇಮೆಂಟ್ ರೂ. ೪೬೦ ಮತ್ತು ಆರ್‌ಟಿಓ ಚಾರ್ಜ್ ರೂ. ೫೦೦ ರೂಪಾಯಿಯಂತೆ ಗೋಣಿಕೊಪ್ಪಲಿನಲ್ಲಿ ಕೆಲವು ಖಾಸಗಿ ಉದ್ಯಮದವರು ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಪೊನ್ನಂಪೇಟೆ ಸಬ್ ರಿಜಿಸ್ಟರ್ ಕಚೇರಿಯಲ್ಲಿಯೂ ಅಷ್ಟೆ ಖಾಸಗಿ ಉದ್ಯಮದವರು ಸರಕಾರದ ಫೀಜುಗಳನ್ನು ಆನ್‌ಲೈನ್‌ನಲ್ಲಿ ಸಂದಾಯ ಮಾಡುವಾಗ ದುಪ್ಪಟ್ಟು ಹಣವನ್ನು ಜನರ ಕೈಯಿಂದ ಸುಲಿಗೆ ಮಾಡುತ್ತಾ ಇದ್ದಾರೆ. ಈ ಬಗ್ಗೆ ಕೂಲಂಕುಶವಾಗಿ ವಿಚಾರಿಸಿ ಆನ್‌ಲೈನ್‌ನಲ್ಲಿ ಹಣ ಸಂದಾಯ ಮಾಡುವಾಗ ಅದಕ್ಕೆ ಸರಿಯಾದ ರಶೀದಿಯನ್ನು ಸಾರ್ವಜನಿಕರಿಗೆ ಕೊಡುವ ವ್ಯವಸ್ಥೆಯನ್ನು ಮಾಡಬೇಕಾಗಿ ಅವರು ಒತ್ತಾಯಿಸಿದ್ದಾರೆ.