ಮಡಿಕೇರಿ, ಡಿ. ೬: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿರವ ಸರ್ಕಾರಿ ಅಸ್ಟೊçà ಟರ್ಫ್ ಮೈದಾನಕ್ಕೆ ‘ಪಾಂಡAಡ ಕುಟ್ಟಪ್ಪ ಕುಟ್ಟಣಿ ಟರ್ಫ್ ಮೈದಾನ’ ಎಂದು ನಾಮಕರಣ ಮಾಡಲು ಸ್ಥಳೀಯ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಮನವಿ ಮಾಡಿದ್ದು, ಈ ಹಿನ್ನೆಲೆ ಪರಿಶೀಲಿಸಿ ನಿಯಮಾನುಸಾರ ಕ್ರಮವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ಹಾಕಿ ಕ್ರೀಡಾ ಕ್ಷೇತ್ರದಲ್ಲಿ ೧೯೯೭ ರಿಂದ ಈಚೆಗೆ ನಡೆದ ಪಂದ್ಯಾವಳಿಯಲ್ಲಿ ನೂರಾರು ತಂಡಗಳು ಭಾಗವಹಿಸಿ ಕ್ರೀಡಾ ಸಿರಿವಂತಿಕೆಯನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಪಸರಿಸುವಂತೆ ಮಾಡಿರುವುದಕ್ಕೆ ಪಾಂಡAಡ ಕುಟ್ಟಪ್ಪ ಕುಟ್ಟಣಿ ಅವರ ಹಾಕಿ ಕ್ರೀಡೆಗೆ ಮಹತ್ತರ ಕೊಡುಗೆ ಪರಿಗಣಿಸಿ ಸರ್ಕಾರಿ ಅಸ್ಟೊçà ಟರ್ಫ್ ಮೈದಾನಕ್ಕೆ ‘ಪಾಂಡAಡ ಕುಟ್ಟಪ್ಪ ಕುಟ್ಟಣಿ ಟರ್ಫ್ ಮೈದಾನ’ ಎಂದು ನಾಮಕರಣ ಮಾಡುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕ್ರೀಡಾ ಸಚಿವರಲ್ಲಿ ಮನವಿ ಮಾಡಿದ್ದು, ಈ ಸಂಬAಧ ಸಚಿವರು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.