ಮಡಿಕೇರಿ, ಡಿ. ೬: ಮಡಿಕೇರಿ ಸನಿಹದ ಕೂಟುಹೊಳೆಯ ಒತ್ತಿನಲ್ಲಿ ಹೋಂಸ್ಟೇ ಹೆಸರಿನಲ್ಲಿ ಬೃಹತ್ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಸಮಸ್ಯೆಯಾ ಗುತ್ತಿರುವುದಾಗಿ ಆರೋಪ ವ್ಯಕ್ತಗೊಂಡಿದೆ. ಈ ಬಗ್ಗೆ ಹೋಂಸ್ಟೇ ಸನಿಹದ ನಿವಾಸಿ ನಿವೃತ್ತ ಮೇಜರ್ ಡಾ. ನಿರ್ಮಲ ಹಾಗೂ ಅವರ ತಂದೆ ಎಸ್.ಎಂ. ದಿನೇಶ್ ಅವರುಗಳು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬAಧಿಸಿದ ಹಲವರಿಗೆ ದೂರು ನೀಡಿದ್ದಾರೆ.

ಈ ಹೋಂಸ್ಟೇಯಲ್ಲಿ ಆಗಾಗ್ಗೆ ಮದುವೆ ಸಮಾರಂಭಗಳು, ಪಾರ್ಟಿ ಸೇರಿದಂತೆ ಬೃಹತ್ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ತಡರಾತ್ರಿಯವರೆಗೆ ಇಲ್ಲಿ ಮೈಕ್ ಶಬ್ಧ, ಪಟಾಕಿಗಳ ಶಬ್ಧದಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಕಳೆದ ಹಲವು ಸಮಯಗಳಿಂದ ನಿರಂತರವಾಗಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕೆ. ನಿಡುಗಣೆ ಪಂಚಾಯಿತಿ, ಮಡಿಕೇರಿ ನಗರಸಭೆ ಮೂಲಕ ಅನುಮತಿ ನೀಡಲಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗಿದ್ದು, ಇಂತಹ ಸಭೆ-ಸಮಾರಂಭಗಳ ಆಯೋಜನೆಗೆ ಯಾವುದೇ ಅನುಮತಿಯನ್ನು ಪಡೆಯಲಾಗಿಲ್ಲ. ಈ ಚಟುವಟಿಕೆ ಗಳನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ಈ ಹಿಂದೆ ಇದರ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಮಾಲೀಕರು ಮುಂದೆ ಈ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಒಪ್ಪಿಕೊಂಡಿ ದ್ದರು. ಆದರೆ ಮತ್ತೆ ಮತ್ತೆ ಇದು ಪುನರಾವರ್ತನೆಯಾಗುತ್ತಿದ್ದು, ಸಮಸ್ಯೆ ಎಂದಿನAತೆ ಮುಂದುವರಿದಿದೆ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.

ಈ ಬಗ್ಗೆ ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ಡಾ. ನಿರ್ಮಲಾ ಹಾಗೂ ಮಹೇಶ್ ಇದೀಗ ಮತ್ತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಸರಕಾರದ ಇತರ ಪ್ರಮುಖ ಇಲಾಖೆಗಳಿಗೂ ದೂರು ನೀಡಿದ್ದಾರೆ.