ಮಡಿಕೇರಿ, ಡಿ.೫ : ಜಿಲ್ಲಾಡಳಿತ, ಭಾರತೀಯ ಕಾಫಿ ಮಂಡಳಿ ಹಾಗೂ ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ವಾರಾಂತ್ಯದ ತಾ.೧೦ ಹಾಗೂ ೧೧ರಂದು ಕಾಫಿ ಉತ್ಸವ ಏರ್ಪಡಿಸಲಾಗಿದೆ.

ಕಾಫಿ ಮಂಡಳಿ ಕಚೇರಿಯ ಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು; ಕೊಡಗು ಜಿಲ್ಲೆ ಪ್ರವಾಸಿ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ಬೆಳೆ ಹಾಗೂ ಪಾನೀಯವಾಗಿರುವ ಕಾಫಿ ಬಗ್ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವದು ಹಾಗೂ ಉತ್ತೇಜಿಸುವ ನಿಟ್ಟಿನಲ್ಲಿ ಕಾಫಿ ಉತ್ಸವ ಏರ್ಪಡಿಸಲಾಗಿದೆ. ದೇಶಾದ್ಯಂತ ಕಾಫಿ ಮೌಲ್ಯ ಸರಪಳಿಯಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಭಾಗವಹಿಸಲಿದ್ದು, ತಮ್ಮ ಕಾಫಿ ಮೌಲ್ಯವರ್ದಿತ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ಉತ್ಸವದಲ್ಲಿ ಯಾರು ಬೇಕಾದರೂ ಭಾಗವಹಿಸಬಹು ದಾಗಿದ್ದು, ಈಗಾಗಲೇ ೨೦ ಸಂಸ್ಥೆಗಳು ಹೆಸರು ನೋಂದಾಯಿಸಿ ಕೊಂಡಿರುವದಾಗಿ ಮಾಹಿತಿ ನೀಡಿದರು.

ಉತ್ಸವದಲ್ಲಿ ಭಾಗವಹಿಸುವ ಸಂಸ್ಥೆಗಳಿಗೆ ರಾಜಾಸೀಟಿನಲ್ಲಿ ವ್ಯವಸ್ಥೆ ಮಾಡಿಕೊಡಲಾಗುವದು. ಒಂದು ಬೆಳೆ ಒಂದು ಜಿಲ್ಲೆ ಯೋಜನೆಯಡಿ ಕಾಫಿ ಕೂಡ ಬರುವದರಿಂದ ಉತ್ಕೃಷ್ಟ ಮಟ್ಟದ ಕಾಫಿಯನ್ನು ದೇಶಾದ್ಯಂತ ಪರಿಚಯಿಸುವದು ಮುಖ್ಯ ಉದ್ದೇಶವಾಗಿದೆ. ಇದು ಪ್ರಥಮ ಪ್ರಯತ್ನವಾಗಿದ್ದು, ಸಾರ್ವಜನಿಕರ, ಪ್ರವಾಸಿಗರ ಸಲಹೆಗಳನ್ನು ಕೂಡ ಸ್ವೀಕರಿಸಲಾಗುವದು. ಉತ್ತಮ ಸ್ಪಂದನ ದೊರೆತಲ್ಲಿ ಕಾರ್ಯಕ್ರಮ ಮುಂದುವರಿಸಲಾಗುವದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಜೇನು-ವೈನ್ ಉತ್ಸವ

ಮುಂದಿನ ೧೭ ಹಾಗೂ ೧೮ರಂದು ಜೇನು ಉತ್ಸವ ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ಶೇ.೩೦ರಷ್ಟು ಮಾತ್ರ ಜೇನು ಉತ್ಪಾದನೆಯಾಗುತ್ತಿದ್ದು, ಸ್ಥಳೀಯ ಜೇನಿನ ಸವಿಯ ಬಗ್ಗೆ ಮಾಹಿತಿ ತಿಳಿಯಪಡಿಸುವದು ಹಾಗೂ ಪರಿಚಯಿಸುವದು ಉದ್ದೇಶವಾಗಿದೆ. ಅದೇ ರೀತಿ ೨೪ ಹಾಗೂ ೨೫ ರಂದು ವೈನ್ ಉತ್ಸವ ಏರ್ಪಡಿಸಿ ಮನೆಯಲ್ಲಿ ತಯಾರಿಸಲಾಗುವ ವಿವಿಧ ರೀತಿಯ ವೈನ್‌ಗಳ ಬಗ್ಗೆ ಪರಿಚಯ ಮಾಡಿ ಕೊಡಲಾಗುವದೆಂದು ಜಿಲ್ಲಾಧಿಕಾರಿ ಗಳು ಮಾಹಿತಿ ನೀಡಿದರು.

ಹೊಸ ರೀತಿಯಲ್ಲಿ ಉತ್ಸವ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿರಿಸಿದ್ದು, ಈ ಬಗ್ಗೆ ಪ್ರಚುರ ಪಡಿಸುವ ನಿಟ್ಟಿನಲ್ಲಿ ಉತ್ಸವದ ಬಗ್ಗೆ ವೀಡಿಯೋ ತಯಾರು ಮಾಡಲಾಗಿದೆ ಎಂದು ತಿಳಿಸಿದರು. ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ಹಾಗೂ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರಮೋದ್ ಅವರುಗಳು ಉತ್ಸವದ ಬಗ್ಗೆ ಮಾಹಿತಿ ನೀಡಿದರು.

(ಮೊದಲ ಪುಟದಿಂದ)

ಬೆಳೆ ಪರಿಹಾರ ವಿತರಣೆ

ಕಾಫಿ ಬೆಳೆ ಹಾನಿಗೆ ಸಂಬAಧಿಸಿದAತೆ ಇದುವರೆಗೆ ೧೨ ಕೋಟಿ ರೂ ಪರಿಹಾರ ಪಾವತಿಸಲಾಗಿದೆ. ೪೭೯ ರೈತರಿಗೆ ಕಾಫಿ ಬೆಳೆ ಪರಿಹಾರ ವಿತರಿಸಲಾಗಿದೆ ಎಂದರು.

ರಾಜಾಸೀಟು ಬಳಿ ಇರುವ ಕೂರ್ಗ್ ವಿಲೇಜ್ಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳ ಕ್ರೀಯಾಶೀಲ ಚಟುವಟಿಕೆಗೆ ಒತ್ತು ನೀಡಲಾಗುವುದು. ನೆಹರು ಮಂಟಪದಲ್ಲಿ ಬೆಳಗ್ಗೆ ೮ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರಾಜರ ಗದ್ದುಗೆ ಸಂಬAಧಿಸಿದAತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.

ಕೊಡಗು ಕಾಫಿ ಮೇಳದಲ್ಲಿ ಸ್ಟಾಲ್ ನಿರ್ಮಾಣಕ್ಕೆ ಕನಿಷ್ಟ ೫ ರಿಂದ ೧೫ ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ (೯೪೮೩೧೧೦೬೨೧), ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಅಜಿತ್ ಕುಮಾರ್ ರಾವುತ್ (೭೦೦೮೮೫೯೨೦೪) ಅವರನ್ನು ಸಂಪರ್ಕಿಸಬಹುದು ಎಂದರು.