ಮಡಿಕೇರಿ, ಡಿ. ೬: ಪ್ರಸಕ್ತ (೨೦೨೨-೨೩) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ೨೦೨೨-೨೩ ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಉಳಿಕೆಯಾಗುವ ಅನುದಾನದಡಿ ಅನುಷ್ಠಾನಗೊಳಿಸುವ “ಮುಖ್ಯಮಂತ್ರಿ ಅವರ ಅಮೃತ ಜೀವನ ಯೋಜನೆ ಕಾರ್ಯಕ್ರಮದಡಿ ಒಂದು ಮಿಶ್ರತಳಿ ಹಸು/ ಸುಧಾರಿತ ತಳಿ ಎಮ್ಮೆ ಘಟಕ, ಪ.ಜಾತಿ-೧೫, ಪ.ಪಂ-೭ ಒಟ್ಟು ೨೨ ಫಲಾನುಭವಿಗಳು (ಸಹಾಯಧನ ಪರಿಶಿಷ್ಟ ಜಾತಿ/ಪಂಗಡ ಶೇ.೯೦, ಘಟಕ ವೆಚ್ಚ ೬೦ ಸಾವಿರ, ಸಹಾಯಧನ ೫೪ ಸಾವಿರ ಫಲಾನುಭವಿಯ ವಂತಿಗೆ ೬ ಸಾವಿರ) ೧೦+೧ ಕುರಿ/ಮೇಕೆ ಘಟಕ ಪ.ಜಾತಿ-೧೦, ಪ.ಪಂ-೪ ಒಟ್ಟು ೧೪ ಫಲಾನುಭವಿಗಳು (ಸಹಾಯಧನ ಪರಿಶಿಷ್ಟ ಜಾತಿ/ಪಂಗಡ ಶೇ.೯೦, ಘಟಕ ವೆಚ್ಚ ೬೬ ಸಾವಿರ, ಸಹಾಯಧನ ೫೯,೪೦೦ ಫಲಾನುಭವಿಯ ವಂತಿಗೆ ೬,೬೦೦) ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇ.೩೩ ರಷ್ಟು, ವಿಶೇಷ ಚೇತನರಿಗೆ ಶೇ. ೩ ಆದÀ್ಯತೆ ನೀಡಲಾಗುವುದು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಫಲಾನುಭವಿಗಳು ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿದಾರರು ಫ್ರೂಟ್ಸ್ ತಂತ್ರಾAಶದಲ್ಲಿ ನೊಂದಾಯಿಸಿರಬೇಕು.

ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ ೯೪೪೮೬೪೭೨೭೬, ವೀರಾಜಪೇಟೆ: ೯೧೪೧೦೯೩೯೯೬, ಪೊನ್ನಂಪೇಟೆ ೯೪೪೯೦೮೧೩೪೩, ಸೊಮವಾರಪೇಟೆ ೯೪೪೮೬೫೫೬೬೦, ಕುಶಾಲನಗರ ೮೯೫೧೪೦೪೦೨೫ ಇವರನ್ನು ಸಂಪರ್ಕಿಸಬಹುದು.

ಅರ್ಜಿಯನ್ನು ಭರ್ತಿಮಾಡಿ ತಾ. ೧೫ ರೊಳಗೆ ತಮ್ಮ ವ್ಯಾಪ್ತಿಯ ತಾಲ್ಲೂಕಿನ ಪಶುವೈದ್ಯ ಆಸ್ಪತ್ರೆಗೆ /ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.