ಮಡಿಕೇರಿ, ಡಿ. ೫: ನಾಪೋಕ್ಲುವಿನಲ್ಲಿ ೨೦೨೩ರಲ್ಲಿ ಜರುಗಲಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಅಪ್ಪಚೆಟ್ಟೋಳಂಡ ಕಪ್‌ನ ಲೋಗೋವನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಿ.ಎಂ. ಬೊಮ್ಮಾಯಿ ಲೋಗೋ ಬಿಡುಗಡೆಗೊಳಿಸಿ ಹಾಕಿ ನಮ್ಮೆಗೆ ಶುಭ ಕೋರಿದರು.
ಈ ಸಂದರ್ಭ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಎಂ.ಎಲ್.ಸಿ. ಮಂಡೇಪAಡ ಸುಜಾ ಕುಶಾಲಪ್ಪ, ಅಪ್ಪಚೆಟ್ಟೋಳಂಡ ಕಪ್ ಉತ್ಸವ ಸಮಿತಿ ಪ್ರಮುಖರಾದ ಮನುಮುತ್ತಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು.