ಕುಶಾಲನಗರ, ಡಿ. ೫: ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಸಡಗರ ಸಂಭ್ರಮದಿAದ ನಡೆಯಿತು. ಹಗಲಿನಲ್ಲಿ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ರಾತ್ರಿ ವೇಳೆ ನಡೆದ ಮಂಟಪಗಳ ವೈಭವಯುತ ಶೋಭಾಯಾತ್ರೆ ಹನುಮ ಜಯಂತಿಗೆ ವಿಶೇಷ ಮೆರುಗನ್ನು ನೀಡಿತು. ದೇವಾನು ದೇವತೆಗಳ ಕಲಾಕೃತಿಗಳನ್ನು ಒಳಗೊಂಡು ತಯಾರಾಗಿದ್ದ ಮಂಟಪಗಳಲ್ಲಿ ಜಗಮಗಿಸುವ ಬೆಳಕಿನ ನಡುವೆ ಕಲಾಕೃತಿಗಳ ಆಕರ್ಷಣೀಯ ಚಲನವಲನ ದೊಂದಿಗೆ ದೇವಲೋಕವೇ ಧರೆಗಿಳಿದಂತಹ ವಾತಾವರಣ ಸೃಷ್ಟಿಯಾಗಿತ್ತು. ರಥಬೀದಿಯ
ಶ್ರೀ ಆಂಜನೇಯ ದೇವಾಲಯದ ೩೭ ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪ್ರಧಾನ ಅರ್ಚಕರಾದ ಡಾ. ರಾಧಾಕೃಷ್ಣ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭ ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ವಿ.ಡಿ. ಪುಂಡರೀಕಾಕ್ಷ, ಕೆ.ಬಿ. ರಾಜೀವ್, ಉತ್ಸವ ಸಮಿತಿಯ ಅಧ್ಯಕ್ಷ ವಿ.ಹೆಚ್. ಪ್ರಶಾಂತ್, ಉಪಾಧ್ಯಕ್ಷ ಕೆ.ವಿ. ಅನುದೀಪ್, ಕಾರ್ಯದರ್ಶಿ ಪಿ.ಪಿ. ನವನೀತ್, ಸಂಚಾಲಕ ಕೆ.ಎಸ್. ಚಂದ್ರಶೇಖರ್, ಖಜಾಂಚಿ ಕೆ.ಎಸ್. ಪ್ರವೀಣ್, ಎಲ್. ಹರೀಶ್, ಟಿ.ವಿನು, ಜನಾರ್ಧನ್ ಮತ್ತಿತರರು ಇದ್ದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಅಲಂಕೃತ ಮಂಟಪದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಮಂಟಪಗಳು ಪಟ್ಟಣದ ಗಣಪತಿ ದೇವಾಲಯದಲ್ಲಿ ಸೇರಿ ನಂತರ ಮಾರಿಯಮ್ಮ ದೇವಾಲಯ ತನಕ
(ಮೊದಲ ಪುಟದಿಂದ) ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು. ಹನುಮ ಜಯಂತಿ ದಶಮಂಟಪಗಳ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್ ದೇವರಾಜ್, ವಿಶ್ವಗಿರಿ, ಅಮೃತ್ರಾಜ್ ಮತ್ತು ದಶಮಂಟಪಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಅದ್ಧೂರಿಯ
ಹನುಮ ಜಯಂತ್ಯೋತ್ಸವ ಶೋಭಾಯಾತ್ರೆಯಲ್ಲಿ ಹೆಚ್ಆರ್ಪಿ ಕಾಲೋನಿಯ ಹಿಂದೂ ಜಾಗರಣ ವೇದಿಕೆ ಅಂಜನಿಪುತ್ರ ಜಯಂತ್ಯೋತ್ಸವ ಸಮಿತಿ ಬೈಚನಹಳ್ಳಿಯ
ಶ್ರೀ ಮಾರಿಯಮ್ಮ ಸಮಿತಿ ಮತ್ತು ಗೆಳೆಯರ ಬಳಗ, ಗೋಪಾಲ್ ಸರ್ಕಲ್ನ ಶ್ರೀ ಗಜಾನನ ಯುವಕ ಸಂಘ, ಮಾದಪಟ್ಟಣ ಗ್ರಾಮದ ಶ್ರೀ ರಾಮದೂತ ಜಯಂತಿ ಆಚರಣಾ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ, ಗುಮ್ಮನಕೊಲ್ಲಿಯ ಶ್ರೀ ಬಸವೇಶ್ವರ ಯುವಕ ಸಂಘ, ಗುಡ್ಡೆಹೊಸೂರು ಶ್ರೀ ವೀರಾಂಜನೇಯ ಸೇವಾ ಸಮಿತಿ, ಹನುಮ ಸೇನಾ ಸಮಿತಿ ಕೂಡುಮಂಗಳೂರು ಸೇರಿ ಒಟ್ಟು ೭ ಮಂಟಪಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಆಯಾಯ ಗ್ರಾಮಗಳಿಂದ ಹೊರಟ ಮಂಟಪಗಳಲ್ಲಿ ಅತ್ಯಾಕರ್ಷಕ ಮಂಟಪಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ನಗದು ಮತ್ತು ಸ್ಮರಣಿಕೆ ಬಹುಮಾನಗಳನ್ನು ನೀಡಲಾಯಿತು. ಶಾಸಕ ರಂಜನ್ ಸೇರಿದಂತೆ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಗುಡ್ಡೆಹೊಸೂರು ಶ್ರೀ ವೀರಾಂಜನೇಯ ಸೇವಾ ಸಮಿತಿ ಮಂಟಪದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತಾದರೂ ಬೆಂಕಿಯನ್ನು ನಂದಿಸುವಲ್ಲಿ ಮಂಟಪದ ಕಾರ್ಯಕರ್ತರು ಯಶಸ್ವಿಯಾದರು.
ಕುಶಾಲನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು, ಸ್ಥಳದಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಸೇರಿದಂತೆ ಇಬ್ಬರು ಡಿವೈಎಸ್ಪಿಗಳು, ೬ ಜನ ಪೊಲೀಸ್ ಇನ್ಸ್ಪೆಕ್ಟರ್ಗಳು, ೨೦ ಮಂದಿ ಸಬ್ಇನ್ಸ್ಪೆಕ್ಟರ್, ೨೦೦ಕ್ಕೂ ಅಧಿಕ ಪೊಲೀಸರನ್ನು ಒಳಗೊಂಡAತೆ ೨ ಕೆಎಸ್ಆರ್ಪಿ, ೪ ಡಿಎಆರ್ ತುಕಡಿಗಳನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿತ್ತು.