ಮಡಿಕೇರಿ, ಡಿ. ೫: ಮುಂದಿನ ವರ್ಷ ಚೈನಾದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರೀಡಾಕೂಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಕೊಡಗಿನ ಯುವಕ ಅಪ್ಪಚಂಗಡ ಬಿ. ಬೆಳ್ಯಪ್ಪ ಆಯ್ಕೆಯಾಗಿದ್ದಾರೆ.

ನಿನ್ನೆ ಸ್ಪೇನ್‌ನಲ್ಲಿ ಆಯೋಜಿಸಲಾಗಿದ್ದ ಏಷ್ಯಾಕಪ್ ಅರ್ಹತಾ ಸುತ್ತಿನ ಅಂತರರಾಷ್ಟಿçÃಯ ಸ್ಪರ್ಧೆಯಲ್ಲಿ ೪೨.೧೯೫ ಕಿ.ಮೀ. ಅಂತರವನ್ನು ಬೆಳ್ಯಪ್ಪ ೨ ಗಂಟೆ ೧೬ ನಿಮಿಷ ೫೧ ಸೆಕೆಂಡ್ ಸಮಯದಲ್ಲಿ ಕ್ರಮಿಸಿ ಏಷ್ಯಾಕಪ್‌ಗೆ ಅರ್ಹತೆ ಪಡೆದಿದ್ದಾರೆ.

ಆಯ್ಕೆಗಾಗಿ ಏಷ್ಯನ್ ಫೆಡರೇಷನ್ ೨.೧೮.೪೯ ಸಮಯ ನಿಗದಿಮಾಡಿತ್ತು.

ಮ್ಯಾರಥಾನ್: ಏಷ್ಯಾ ಕಪ್‌ಗೆ ಬೆಳ್ಯಪ್ಪ ಆಯ್ಕೆ

(ಮೊದಲ ಪುಟದಿಂದ) ಆದರೆ ಬೆಳ್ಯಪ್ಪ ನಿಗದಿತವಾಗಿದ್ದ ಸಮಯಕ್ಕಿಂತ ೨ ನಿಮಿಷ ಮೊದಲೇ ಗುರಿ ತಲುಪಿ ಸಾಧನೆ ತೋರಿದ್ದಾರೆ. ಇದು ಈ ವರ್ಷದ ಇವರ ಅತ್ಯುತ್ತಮ ಸಾಧನೆಯಾಗಿದೆ. ಸ್ಪರ್ಧೆಯಲ್ಲಿ ವಿವಿಧ ರಾಷ್ಟçಗಳ ೨೫೦ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಭಾರತೀಯ ಸೇನೆಯಲ್ಲಿರುವ ಬೆಳ್ಯಪ್ಪ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್‌ನಲ್ಲಿದ್ದು, ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಶ್ವ ರ‍್ಯಾಂಕಿAಗ್‌ನಲ್ಲಿ ಇವರು ಇದೀಗ ೪೩ನೇ ಸ್ಥಾನದಲ್ಲಿದ್ದಾರೆ.

ಏಷ್ಯಾಕಪ್ ಅರ್ಹತೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇವರು ಇನ್ನಷ್ಟು ಹೆಚ್ಚಿನ ತರಬೇತಿ ಪಡೆಯಲಿದ್ದಾರೆ. ಬೆಳ್ಯಪ್ಪ ಟಿ. ಶೆಟ್ಟಿಗೇರಿಯವರಾದ ಅಪ್ಪಚಂಗಡ ಬೋಪಯ್ಯ ಹಾಗೂ ರೋಜಾ ದಂಪತಿಯ ಪುತ್ರರಾಗಿದ್ದಾರೆ.