*ಗೋಣಿಕೊಪ್ಪ, ಡಿ. ೫: ಗೋಣಿಕೊಪ್ಪ ಹಿದಾಯಿ ಮಸೀದಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ, ಗೋಣಿಕೊಪ್ಪ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೀರಾಜಪೇಟೆ ನಿವಾಸಿ ಮಹಮ್ಮದ್ ಹಬೀದ್ (೩೨) ಬಂಧಿತ ಆರೋಪಿಯಾಗಿದ್ದಾನೆ. ನವೆಂಬರ್ ೨೮ರಂದು ಗೋಣಿಕೊಪ್ಪ ಹಿದಾಯಿ ಮಸೀದಿಯಲ್ಲಿ ಸುಮಾರು ೭೦ ಸಾವಿರ ಮೌಲ್ಯದ ಮೊಬೈಲ್ ಆಂಬ್ಲಿಪ್ಲೇಯರ್ ಹಾಗೂ ೭ ಸಾವಿರ ಮೌಲ್ಯದ ನಗದು ಕಳವಾಗಿತ್ತು. ಮಸೀದಿಯ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ಮಹಮ್ಮದ್ ಹಬೀದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವೀರಾಜಪೇಟೆ ಪೊಲೀಸ್ ಉಪಾಧೀಕ್ಷಕ ನಿರಂಜನ್ ರಾಜೇ ಅರಸ್ ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದ ರಾಜು ನೇತೃತ್ವದಲ್ಲಿ ಉಪನಿರೀಕ್ಷಕ ದೀಕ್ಷಿತ್ ಕುಮಾರ್ ಹಾಗೂ ಸಹಾಯಕ ಉಪನಿರೀಕ್ಷಕ ಸಾಬು, ಸಿಬ್ಬಂದಿಗಳಾದ ಹೆಚ್.ಕೆ. ಕೃಷ್ಣ, ಮಣಿಕಂಠ, ಕೃಷ್ಣ ಮೂರ್ತಿ, ಅನೀಫ್, ಪುನೀತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.