ಮಡಿಕೇರಿ, ಡಿ. ೪: ವಾರ್ಷಿಕವಾಗಿ ಬಾಳುಗೋಡುವಿನಲ್ಲಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಜರುಗುವ ಕೊಡವನಮ್ಮೆ ಕಾರ್ಯಕ್ರಮದಲ್ಲಿ ಈ ಬಾರಿ ನಡೆದ ಹಾಕಿ ಪಂದ್ಯಾವಳಿಗೆ ಹಾಕಿ ಕರ್ನಾಟಕ ಹಾಗೂ ಹಾಕಿ ಕೊಡಗು ಸಂಸ್ಥೆಯಿAದ ಅಡಚಣೆಯಾದ ಬಗ್ಗೆ ಇಂದು ನಡೆದ ಒಕ್ಕೂಟದ ಮಹಾಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತರ ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾಟದಲ್ಲಿ ಹಾಕಿ ಆಟಗಾರರಿಗೆ ತಡೆ ಹಾಗೂ ಪಾಲ್ಗೊಂಡ ಕೆಲ ಆಟಗಾರರನ್ನು ಅಮಾನತು ಮಾಡಿದ ಕ್ರಮವನ್ನು ಎಲ್ಲರೂ ಖಂಡಿಸಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣ ಮರು ಕಳಿಸದಂತೆ ಸಂಬAಧಿಸಿದ ಸಂಸ್ಥೆಯವರು ಎಚ್ಚರ ವಹಿಸುವಂತೆ ತಿಳಿಸಲಾಯಿತು. ಜನಾಂಗದ ನಡುವಿನ ಈ ಕ್ರೀಡಾಕೂಟಕ್ಕೆ ಈ ಸಂಸ್ಥೆಯ ಅನುಮತಿ - ಸಹಭಾಗಿತ್ವ ಪಡೆಯಲಾಗಿಲ್ಲ ಎಂಬ ಕಾರಣ ಸಮಂಜಸವಲ್ಲ ಇದು ಮುಂದೆ ನಡೆಯಬಾರದು ಎಂದು ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು.

ಹಿರಿಯರಾದ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಮಾತನಾಡಿ, ಸಮಾಜ - ಸಂಘ - ಸಂಸ್ಥೆಗಳಲ್ಲಿ

(ಮೊದಲ ಪುಟದಿಂದ) ರಾಜಕೀಯ ತರದೆ ಒಗ್ಗಟ್ಟಿನಿಂದ ಮುಂದುವರಿಯಲು ಕರೆ ನೀಡಿದರು. ಎಂಎಲ್‌ಸಿ ಮಂಡೇಪAಡ ಸುಜಾ ಕುಶಾಲಪ್ಪ ಅವರು ಮಾತನಾಡಿ, ರಾಜ್ಯ ಸರಕಾರದ ಬಜೆಟ್ ಅನುದಾನದಂತೆ ಹಂಚಿಕೆ ಮಾಡಲಾಗಿರುವ ರೂ. ೧೦ ಕೋಟಿ ಹಣವನ್ನು ಶೀಘ್ರದಲ್ಲಿ ಪಡೆಯಲು ಸಹಕರಿಸುವುದಾಗಿ ತಿಳಿಸಿದರು.

ವಿಷ್ಣು ಕಾರ್ಯಪ್ಪ ತಂಡ ಮುಂದುವರಿಕೆ

ಈ ಸಂದರ್ಭ ಒಕ್ಕೂಟದ ಮುಂದಿನ ಸಾಲಿನ ಆಡಳಿತ ಮಂಡಳಿಗೆ ಚುನಾವಣೆಯೂ ನಿಗದಿಯಾಗಿತ್ತು. ಆದರೆ ಮುಂದಿನ ಅವಧಿಗೆ ಚುನಾವಣೆ ನಡೆಸದೆ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ತಂಡವನ್ನೇ ಮುಂದುವರಿಸಲು ಸಭೆಯಲ್ಲಿ ನಿಧüðರಿಸಲಾಯಿತು.

ವೇದಿಕೆಯಲ್ಲಿ ಒಕ್ಕೂಟ ಉಪಾಧ್ಯಕ್ಷರುಗಳಾದ ಬಾಳಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್, ಸೋಮವಾರಪೇಟೆ ಸಮಾಜದ ಮಾಳೇಟಿರ ಅಭಿಮನ್ಯು ಕುಮಾರ್, ಬೆಂಗಳೂರು ಸಮಾಜದ ಅಧ್ಯಕ್ಷ ಕರವಟ್ಟಿರ ಪೆಮ್ಮಯ್ಯ, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಒಕ್ಕೂಟದ ಪ್ರಮುಖರಾದ ಚಿರಿಯಪಂಡ ಕಾಶಿಯಪ್ಪ, ವಾಟೇರಿರ ಶಂಕರಿ ಪೂವಯ್ಯ ಉಪಸ್ಥಿತರಿದ್ದರು.

ವೀರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು, ಅಮ್ಮತ್ತಿ, ಚೆಟ್ಟಳ್ಳಿ, ಮೂರ್ನಾಡು, ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ ಮತ್ತಿತರ ಕೊಡವ ಸಮಾಜಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗಿಗಳಾಗಿದ್ದರು. ಒಕ್ಕೂಟದ ಇತರ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಬೊಪ್ಪಂಡ ಬೊಳ್ಳಮ್ಮ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ಸ್ವಾಗತಿಸಿ, ವಂದಿಸಿದರು.