ಕುಶಾಲನಗರ, ಡಿ. ೪: ಕುಶಾಲನಗರ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಮತ್ತು ದೇವಸ್ಥಾನ ಸೇವಾ ಟ್ರಸ್ಟ್ ಹಾಗೂ ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ೩೭ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು.

ಕುಶಾಲನಗರ ರಥ ಬೀದಿಯ ಆಂಜನೇಯ ದೇವಾಲಯದಲ್ಲಿ ಪವನ ಹೋಮ ಜರುಗಿತು. ತಾ. ೫ ರಂದು (ಇಂದು) ಬೆಳಗ್ಗೆ ಏಳು ಗಂಟೆಗೆ ಸ್ವಾಮಿಗೆ ಅಭಿಷೇಕ ನಂತರ ೧೨ ಗಂಟೆಗೆ ಮಹಾ ಮಂಗಳಾರತಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ ಭವ್ಯ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಏರ್ಪಡಿಸಲಾಗಿದೆ. ಹನುಮ ಜಯಂತಿ ಅಂಗವಾಗಿ ಸಂಜೆ ಹನುಮಂತ ಉತ್ಸವ ಸಮಿತಿ ಆಶ್ರಯದಲ್ಲಿ ಎಂಟು ಮಂಟಪಗಳ ಅದ್ದೂರಿ ಶೋಭಾಯಾತ್ರೆ ನಡೆಯಲಿದೆ.