ಮಡಿಕೇರಿ, ಡಿ. ೪: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ಮಂಗಳೂರು ಪೊಲೀಸರ ತಂಡ ಕೊಡಗಿಗೂ ಆಗಮಿಸಿ ತನಿಖೆ ನಡೆಸಿದೆ.

ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಇಬ್ಬರು ಈ ಹಿಂದೆ ಕೊಡಗು ಜಿಲ್ಲೆಗೆ ಬಂದಿದ್ದರು. ಕಳೆದ ಮೇ ತಿಂಗಳಿನಲ್ಲಿ ದಕ್ಷಿಣ ಕೊಡಗಿನ ವೆಸ್ಟ್ನೆಮ್ಮಲೆಯ ಹೋಂಸ್ಟೇಯೊAದರಲ್ಲಿ ತರಬೇತಿ ಶಿಬಿರವೊಂದರಲ್ಲಿ ಪಾಲ್ಗೊಂಡಿದ್ದರು. ಹೋಂಸ್ಟೇ ವತಿಯಿಂದ ‘ಕಾಡಿನ ಉಳಿವು’ ಕುರಿತಾಗಿ ೩ ದಿನಗಳ ತರಬೇತಿ ಶಿಬಿರ ನಡೆಸಲಾಗಿತ್ತು.

ಈ ಕುರಿತು ವೆಬ್‌ಸೈಟ್‌ನಲ್ಲಿಯೂ ಪ್ರಕಟಗೊಂಡಿತ್ತು. ಅದನ್ನು ಗಮನಿಸಿದ ರಾಜ್ಯದ ೧೪ ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅವರ ಪೈಕಿ ಮಹಿಳೆಯರು, ಮಕ್ಕಳು ಇದ್ದರು. ಅಲ್ಲದೇ ಈಗ ಬಂಧಿತರಾಗಿರುವ ಇಬ್ಬರು ಆರೋಪಿಗಳೂ ಪಾಲ್ಗೊಂಡಿದ್ದರು. ತಾವು ಪಾಲ್ಗೊಂಡಿದ್ದ ಕುರಿತು ಅವರೇ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತನಿಖೆಯ ಸಂದರ್ಭ ಅವರು ಇಲ್ಲಿ ಭಾಗವಹಿಸಿದ್ದನ್ನು ಖಾತರಿಪಡಿ ಕೊಂಡು ದಾಖಲಾತಿಗೆ ತರುವ ಹಿನ್ನೆಲೆಯಲ್ಲಿ ಹಾಗೂ ಇತರ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಹೋಂಸ್ಟೇಗೆ ಭಾನುವಾರ ಬಂದಿದ್ದು, ಸ್ಥಳದಲ್ಲಿ ಮಾಲೀಕರು ಹಾಗೂ ಇತರರನ್ನು ವಿಚಾರಣೆ ನಡೆಸಿ, ವಿವರ ಸಂಗ್ರಹಿಸಿ ತೆರಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.