ವೀರಾಜಪೇಟೆ, ಡಿ. ೪: ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಪೋಷಕರಿಂದಾಗಬೇಕು ಎಂದು ಕಾವೇರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಇಟ್ಟಿರ ಬಿದ್ದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ವಿದ್ಯಾಸಂಸ್ಥೆಗಳು ಮತ್ತು ಕಾವೇರಿ ಪದವಿಪೂರ್ವ ಕಾಲೇಜು ವೀರಾಜಪೇಟೆ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಕಾವೇರಿ ಕಾರ್ನಿವಲ್ ೨೦೨೨ರ ಅಂಗವಾಗಿ ನಡೆದ ಅಂತರ್ ಪ್ರೌಢಶಾಲಾ ಮಟ್ಟದ ಸ್ಪರ್ಧೆಗಳ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ವಿವಿಧ ಬಗೆಯ ಪ್ರತಿಭೆಗಳು ಅಡಗಿರುತ್ತದೆ. ಇವುಗಳನ್ನು ಬಹಿರಂಗಪಡಿಸಲು ಪೋಷಕರು ಮತ್ತು ಗುರುಗಳು ಶ್ರಮವಹಿಸಬೇಕು. ಪ್ರತಿಭೆಗಳನ್ನು ಅನಾವರಣಗೊಳಿಸಲು ಸಂಸ್ಥೆಗಳು ವೇದಿಕೆ ಕಲ್ಪಿಸುವಂತಾದಲ್ಲಿ ವಿದ್ಯಾರ್ಥಿಯನ್ನು ಸಮಾಜವು ಗುರುತಿಸುತ್ತದೆ. ಶಿಸ್ತು ಸಂಯಮ, ಸಮಯ ಪರಿಪಾಲನೆ, ಕಲಿಕೆ ಮೊದಲಾದವುಗಳು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸ ಬಲ್ಲದು. ಕಾವೇರಿ ವಿದ್ಯಾಸಂಸ್ಥೆಯ ಅಂಗವಾಗ ಕಾವೇರಿ ಕಾಲೇಜು ಅಂತರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯ ಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೂರ್ಗ್ ಹಾಕಿ ಮತ್ತು ಫುಟ್ಬಾಲ್ ಅಸೋಸಿಯೇಷನ್ನ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರು ಪ್ರತಿಭೆ ಎಂಬುದು ದೇವರು ನೀಡಿದ ವರ. ಕ್ರೀಡೆ, ಕಲೆ, ಕಲಿಕೆ ಎಂಬ ವಿವಿಧ ಆಯಾಮಗಳಲ್ಲಿ ಅಸಕ್ತಿಯೊಂದಿಗೆ, ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದಲ್ಲಿ ಜೀವನ ರೂಪಿಸಲು ಸಾದ್ಯವಾಗುತ್ತದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಮೊದಲಿಗೆ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕತ್ತಿಯಾಟ್ ನೃತ್ಯ ನಡೆಯಿತು. ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃಕ ಕಲಾ ಪ್ರಕಾರಗಳು ಪ್ರದರ್ಶನವಾದವು, ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ೧೫ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಕಾಲೇಜು ಆವರಣದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ವಿಜ್ಞಾನ ಮೇಳವು ಜನಾಕರ್ಷಣೆಗೊಂಡಿತು. ವಿದ್ಯಾರ್ಥಿಗಳು ವಿವಿಧ ತಿಂಡಿ ತಿನಿಸುಗಳ ಮಳಿಗೆಗಳನ್ನು ಹೊಂದಿ ತಿನಿಸುಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಿಗೆ ಹಗ್ಗಾಜಗ್ಗಾಟ ಎರ್ಪಡಿಸಲಾಗಿತ್ತು.
ಸಮೂಹ ನೃತ್ಯ ಸ್ಪರ್ಧೆಯಲ್ಲಿ ಕಾವೇರಿ ಪ್ರೌಢಶಾಲೆ ಪ್ರಥಮ, ಮೂರ್ನಾಡು ಪ್ರೌಢಶಾಲೆ ದ್ವೀತಿಯ ಮತ್ತು ಎಸ್.ಎಂ.ಎಸ್ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತ್ತು. ಟ್ರಜರ್ ಹಂಟ್ ಸ್ಫರ್ಧೆಯಲ್ಲಿ ಮೂರ್ನಾಡು ಪ್ರೌಢಶಾಲೆ ಪ್ರಥಮ, ಎಸ್.ಎಂ.ಎಸ್ ಪ್ರೌಢಶಾಲೆ ದ್ವಿತೀಯ ಮತ್ತು ಶ್ರೀ ರಾಮಕೃಷ್ಣ ಟ್ರಸ್ಟ್ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತ್ತು. ಹಗ್ಗಜಗ್ಗಾಟ ಸ್ಪರ್ಧೆ ಬಾಲಕರ ವಿಭಾಗದಲ್ಲಿ ಶ್ರೀ ರಾಮಕೃಷ್ಣ ಟ್ರಸ್ಟ್ ಪ್ರೌಢಶಾಲೆ ಪ್ರಥಮ, ಎಸ್.ಎಂ.ಎಸ್. ಪ್ರೌಢಶಾಲೆ ದ್ವಿತೀಯ ಕೂರ್ಗ್ ವ್ಯಾಲಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತ್ತು. ಬಾಲಕಿಯರ ವಿಭಾಗದಲ್ಲಿ ಎಸ್.ಎಂ.ಎಸ್ ಪ್ರೌಢಶಾಲೆ ಪ್ರಥಮ, ಶ್ರೀ ರಾಮಕೃಷ್ಣ ಟ್ರಸ್ಟ್ ಪ್ರೌಢಶಾಲೆ ದ್ವಿತೀಯ, ಮತ್ತು ರೋಟರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತ್ತು. ವಿಜ್ಞಾನ ಮಾದರಿ ತಯಾರಿಕೆ ಸ್ಫರ್ಧೇಯಲ್ಲಿ ಮೂರ್ನಾಡು ಪ್ರೌಢ ಶಾಲೆ ಪ್ರಥಮ, ಮೊರಾರ್ಜಿ ವಸತಿ ಪ್ರೌಢ ಶಾಲೆ ದ್ವಿತೀಯ ಮತ್ತು ಅನ್ವರುಲ್ ಹುದಾ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ವಿಜೇತರಿಗೆ ಪರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಶಂಕರ್ ನಾರಾಯಣ್ ಅವರು ಉಪಸ್ಥಿತರಿದ್ದರು. ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅವರು ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರಕ್ಷೀತಾ, ರಂಜಿತ ಟಿ.ಆರ್., ಡಯಾನ ಮತ್ತು ಉಪನ್ಯಾಸಕಿ ಎ,ಎಂ. ಡಯಾನ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ದಮಯಂತಿ ಅವರು ಸರ್ವರನ್ನು ವಂದಿಸಿದರು.
ಸಮಾರAಭದಲ್ಲಿ ಕಮಲಾಕ್ಷಿ ಬಿದ್ದಪ್ಪ, ಪದವಿಪೂರ್ವ ಮತ್ತು ಪದವಿ ಕಾಲೇಜಿನ ಬೋಧಕ ಬೋಧÀಕೇತರ ಸಿಬ್ಬಂದಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರುಗಳು ಹಾಜರಿದ್ದರು.