ವೀರಾಜಪೇಟೆ, ಡಿ. ೪: ದೇಶದಲ್ಲಿ ರೈತರಿಗೆ ಮತ್ತು ಗ್ರಾಮೀಣ ಅಭಿವೃದ್ಧಿಯ ಜೊತೆಗೆ ಬಡ ಜನರ ಸರ್ವತೋಮುಖ ಏಳಿಗೆಗೆ ನಬಾರ್ಡ್ ದಾರಿದೀಪವಾಗಿದೆ ಎಂದು ನಬಾರ್ಡ್ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಹೇಳಿದರು.
ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ವತಿಯಿಂದ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ರಮೇಶ್ ಬಾಬು, ನಬಾರ್ಡ್ ೧೯೮೨ರಲ್ಲಿ ಸ್ಥಾಪನೆಯಾಗಿದೆ.
ಈ ಸಂಸ್ಥೆ ಪ್ರತಿಯೊಬ್ಬರಿಗೂ ಅದರಲ್ಲೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿವಿಧ ರೀತಿಯ ಕೌಶಲ್ಯ ತರಬೇತಿಗಳು, ನಾಯಕತ್ವ ತರಬೇತಿ ನೀಡುವುದರ ಮೂಲಕ ಸ್ವಾವಲಂಬಿ ಜೀವನ ನಡೆಸಲು ದಾರಿದೀಪವಾಗಿದೆ. ಕರ್ನಾಟಕದಲ್ಲಿ ೫ ಲಕ್ಷದಷ್ಟು ಸ್ವ ಸಹಾಯ ಸಂಘಗಳಿವೆ.
ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಬೆಳೆದಿದೆ. ದೈರ್ಯ, ಮುಂದಾಳತ್ವ, ನಾಯಕತ್ವ, ಆತ್ಮ ವಿಶ್ವಾಸ ಬೆಳೆಯುತ್ತದೆ. ಮಹಿಳೆಯರು ಅದರಲ್ಲೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿವಿಧ ರೀತಿಯ ಕೌಶಲ್ಯ ತರಬೇತಿಗಳು, ನಾಯಕತ್ವ ತರಬೇತಿ ನೀಡುವುದರ ಮೂಲಕ ಸ್ವಾವಲಂಬಿ ಜೀವನ ನಡೆಸಲು ದಾರಿದೀಪವಾಗಿದೆ. ಕರ್ನಾಟಕದಲ್ಲಿ ೫ ಲಕ್ಷದಷ್ಟು ಸ್ವ ಸಹಾಯ ಸಂಘಗಳಿವೆ.
ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಬೆಳೆದಿದೆ. ದೈರ್ಯ, ಮುಂದಾಳತ್ವ, ನಾಯಕತ್ವ, ಆತ್ಮ ವಿಶ್ವಾಸ ಬೆಳೆಯುತ್ತದೆ. ಮಹಿಳೆಯರು ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಧರ್ಮಗುರು ಯೇಸು ಪ್ರಸಾದ್ ವಹಿಸಿದ್ದರು. ವೀರಾಜಪೇಟೆ ಯೂನಿಯನ್ ಬ್ಯಾಂಕ್ನ ಚಂದ್ರು, ಓಡಿಪಿಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೆಜಸ್, ಸಂಜೀವಿನಿ ಒಕ್ಕೂಟದ ದಿವ್ಯ ಉಪಸ್ಥಿತರಿದ್ದರು. ವೀರಾಜಪೇಟೆ ಓಡಿಪಿ ಸಂಸ್ಥೆಯ ರೀಟಾ ಜೋಸೆಫ್, ಮೈಸೂರು ಓಡಿಪಿ ಸಂಸ್ಥೆಯ ಯೋಜನಾ ಸಂಯೋಜಕಿ ಮೋಲಿ ಅವರು ಸಂಪ ನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ೩೬ ಜನ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.