ಸೋಮವಾರಪೇಟೆ, ಡಿ. ೨: ಇಲ್ಲಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಮಕ್ಕಳ ಸಂತೆಗೆ ಚಾಲನೆ ನೀಡಿದ ಶಾಲಾ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಅವಧಿಯಲ್ಲಿಯೇ ವ್ಯಾವಹಾರಿಕ ಜ್ಞಾನದ ಕುರಿತು ಮಾಹಿತಿ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳ ಸಂತೆಯAತಹ ಕಾರ್ಯಕ್ರಮಗಳು ನಡೆಯಬೇಕು. ಪೋಷಕರು ಸಹ ತಮ್ಮ ಮಕ್ಕಳ ವ್ಯಾವಹಾರಿಕ ಚಾತುರ್ಯವನ್ನು ನೋಡಲು ಅವಕಾಶವಾಗುತ್ತದೆ ಎಂದರು. ಶಿಕ್ಷಕರಾದ ಶಬರಿಗಿರೀಶ್, ಕಾವ್ಯ, ಗೌತಮಿ, ಶಬಾನಾ, ಕೀರ್ತಿ, ಮೇಘ ಪೋಷಕರಾದ ಹೇಮರಾಜು ಮತ್ತಿತರರು ಇದ್ದರು. ಮಕ್ಕಳ ಪೋಷಕರು ಸಂತೆಯಲ್ಲಿ ಭಾಗವಹಿಸಿ ವಿವಿಧ ತರಕಾರಿ, ವಸ್ತು, ತಿಂಡಿ ತಿನಿಸುಗಳನ್ನು ಖರೀದಿಸಿದರು. ಮಕ್ಕಳು ಸಂಭ್ರಮದಿAದ ಸಂತೆಯ ವ್ಯಾಪಾರ ವಹಿವಾಟಿನಲ್ಲಿ ಭಾಗವಹಿಸಿದ್ದರು.