ಮಡಿಕೇರಿ, ಡಿ. ೨: ಡ್ರಂ ಸೀಡರ್ ಭತ್ತ ಬಿತ್ತನೆಯಿಂದ ರೈತರು ಕಡಿಮೆ ಖರ್ಚಿನಲ್ಲಿ ಭತ್ತ ವ್ಯವಸಾಯ ಮಾಡಬಹುದು ಎಂದು ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶಭಾನ ಎಂ. ಶೇಕ್ ಹೇಳಿದರು. ಸಮೀಪದ ಹಾಲುಗುಂದ ಬಿ. ಜಯ ಬೋಪಣ ಅವರ ಗದ್ದೆಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಸ್ತರಣಾ ಶಿಕ್ಷಣ ಘಟಕ ಆಯೋಜಿಸಿದ “ಡ್ರಂ ಸೀಡರ್ ಭತ್ತದ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ವಿಕೋಪ, ಕಾಡು ಪ್ರಾಣಿಗಳ ಹಾವಳಿ, ಕೂಲಿಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ಭತ್ತದ ಗದ್ದೆ ಮಾಡುವುದನ್ನು ನಿಲ್ಲಿಸಿದ್ದಾರೆ.
ಕೃಷಿ ಇಲಾಖೆಯಿಂದ ಬೆಳೆ ವಿಮೆ ಮಾಡಿಸಿದವರಿಗೆ ವಿಮಾ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಇದರ ಜೊತೆಗೆ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಪಂದಿಕAಡ ಬಿ.ಜಯ ಬೋಪಣ್ಣ ಮಾತನಾಡಿ, ಡ್ರಂ ಸೀಡರ್ ಭತ್ತ ಬೇಸಾಯವನ್ನು ನಾನು ನಂಬಿರಲಿಲ್ಲ ಸ್ವತಃ ನನ್ನ ಗದ್ದೆಯಲ್ಲಿ ಬೆಳೆದು ಸಹಾಯವಾಗಿದೆ.
ಸಸಿಮಡಿ ತಯಾರಿಕೆಗೆ, ಸಸಿ ಕಿತ್ತು ಗದ್ದೆಗೆ ಸಾಗಾಟ ಮತ್ತು ನಾಟಿಗೆ ಬೇಕಾಗುವ ೧೬-೧೮ ಕಾರ್ಮಿಕರ ಉಳಿತಾಯವಾಗುತ್ತದೆ. ಉತ್ತಮ ಭೂಮಿ ಸಿದ್ಧತೆಯಿಂದ ಕಳೆಗಳನ್ನು ನಿರ್ವಹಿಸಬಹುದು, ಇಲ್ಲವಾದಲ್ಲಿ ಕಳೆನಾಶಕಗಳಿಂದ ಕಳೆ ನಿಯಂತ್ರಿಸಬಹುದು ಜೊತೆಗೆ ನನ್ನ ಗದ್ದೆಯಲ್ಲಿ ಡ್ರಂ ಸೀಡರ್ ಪದ್ಧತಿಯಿಂದ ಹೆಚ್ಚಿನ ಕದಿರು ಬಂದಿದ್ದು ೧೦-೧೫ ಪ್ರತಿಶತ ಹೆಚ್ಚಿನ ಭತ್ತದ ಮತ್ತು ಹುಲ್ಲಿನ ಇಳುವರಿ ನಿರೀಕ್ಷಿಸಿದ್ದೇನೆ ಎಂದ ಅವರು, ಕೃಷಿಕರು ಡ್ರಂ ಸೀಡರ್ ಪದ್ಧತಿ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಭತ್ತ ಬೇಸಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಬೇಸಾಯ ಶಾಸ್ತçಜ್ಞ ಡಾ. ಬಸವಲಿಂಗಯ್ಯ ಮಾತನಾಡಿ, ಕೊಡಗಿನಲ್ಲಿ ಕಳೆದ ೩ ವರ್ಷಗಳಿಂದ ರೈತರಿಗೆ ಡ್ರಂ ಸೀಡರ್ನಿಂದ ಭತ್ತ ಬಿತ್ತನೆ ಹಾಗೂ ಬೇಸಾಯ ಕ್ರಮಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ.
ಈ ಪದ್ಧತಿಯಲ್ಲಿ ಅತಿ ಕಡಿಮೆ ಖರ್ಚಿನೊಂದಿಗೆ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು ಹಾಗೂ ಜಿಲ್ಲೆಯಲ್ಲಿ ಡ್ರಂ ಸೀಡರ್ ಭತ್ತ ಬೇಸಾಯವು ಸಮಾರು ೨೦೦೦ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಅನುಷ್ಠಾನಗೊಂಡಿರುವುದು ಬಹಳ ಸಂತಸದ ವಿಷಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಡಿಕೇರಿಯ ವಿಸ್ತರಣಾ ತಕ್ಷಣ ಘಟಕದ ಮುಖ್ಯಸ್ಥ ಡಾ. ಕೆಂಚರೆಡ್ಡಿ ಮಾತನಾಡಿದರು.