ಮಡಿಕೇರಿ, ಡಿ. ೧: ಯಾವುದೇ ರೀತಿಯ ನೋಟೀಸ್ ನೀಡದೆ ದಿಢೀರ್ ಆಗಿ ೧೫ ಆಟಗಾರರನ್ನು ಹಾಗೂ ೧ ತಂಡವನ್ನು ಹಾಕಿ ಕೂರ್ಗ್ ಒಂದು ವರ್ಷಗಳ ಕಾಲ ಅಮಾನತ್ತು ಮಾಡಿದ ವಿಚಾರಕ್ಕೆ ಸಂಬAಧಿಸಿದAತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಮೂರ್ನಾಡು ಕೊಡವ ಸಮಾಜ ತಿಳಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ, ಫೆಡರೇಷನ್ ಆಫ್ ಕೊಡವ ಸಮಾಜದ ವತಿಯಿಂದ ಇತ್ತೀಚಿಗೆ (ಮೊದಲ ಪುಟದಿಂದ) ಬಾಳುಗೋಡಿನಲ್ಲಿ ನಡೆದ ಅಂತರ ಕೊಡವ ಸಮಾಜಗಳ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಸಮಾಜ ಸ್ಪರ್ಧಿಸಿತ್ತು. ಇದಾದ ಬಳಿಕ ಪತ್ರಿಕೆಗಳ ಮೂಲಕ ನೋಂದಾಯಿತ ಹಾಕಿ ಕೂರ್ಗ್ ಆಟಗಾರರು ಅನುಮತಿ ಪಡೆಯದೆ ಸಂಸ್ಥೆಯು ಸಹಭಾಗಿತ್ವ ವಹಿಸದ ಪಂದ್ಯಾಟದಲ್ಲಿ ಆಟವಾಡಿರುವುದನ್ನು ಆಕ್ಷೇಪಿಸಿ ಮುಂದಿನ ೧೨ ತಿಂಗಳು ಹಾಕಿ ಕೂರ್ಗ್ ಅಧೀನದಲ್ಲಿ ನಡೆಯುವ ಯಾವುದೇ ಪಂದ್ಯಾಟದಲ್ಲಿ ಮೂರ್ನಾಡು ಪ್ರತಿನಿಧಿಸಿದ ೧೦ ಆಟಗಾರರು ಸೇರಿ ಇತರ ತಂಡದ ೫ ಹಾಗೂ ಶ್ರೀಮಂಗಲ ತಂಡ ಭಾಗವಹಿಸುವಂತಿಲ್ಲ ಎಂದು ತಿಳಿಸಿದೆ. ಇದರಿಂದ ಆಟಗಾರರ ಭವಿಷ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

ಆಟಗಾರರ ಗಮನಕ್ಕೆ ತಾರದೇ ಏಕಾಏಕಿಯಾಗಿ ನಿರ್ಧಾರ ಕೈಗೊಂಡಿರುವುದನ್ನು ಪ್ರಶ್ನಿಸಿ ವಕೀಲರುಗಳಾದ ಅಜ್ಜಿಕುಟ್ಟೀರ ಪೊನ್ನಣ್ಣ ಹಾಗೂ ಅಚ್ಚಪಂಡ ಗಿರಿ ಉತ್ತಪ್ಪ ಮೂಲಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆಗೆ ಮನವಿ ಮಾಡಲಾಗಿತ್ತು. ಅದರಂತೆ ಇದೀಗ ಅಮಾನತ್ತು ಮಾಡಿರುವ ಕ್ರಮಕ್ಕೆ ತಡೆಯಾಜ್ಞೆ ದೊರೆತಿದೆ ಎಂದು ಮಾಹಿತಿ ನೀಡಿದ ಅವರು, ಹಾಕಿ ಕೂರ್ಗ್ ಆಟಗಾರರಿಗೆ ಪ್ರೋತ್ಸಾಹ ನೀಡಬೇಕೆ ಹೊರತು ಸ್ವಾರ್ಥಸಾಧನೆ ಮಾಡಬಾರದು. ಇಲ್ಲದ ನೀತಿ ನಿಯಮಗಳನ್ನು ಹೇರುವ ಮನಸ್ಥಿತಿಯಿಂದ ಹೊರಬಂದು ಆಟಗಾರರ ಬೆಳವಣಿಗೆಗೆ ಶ್ರಮಿಸಲಿ ಎಂದು ಸಲಹೆ ನೀಡಿದರು.

ಹಾಕಿ ಆಟಗಾರ ಚೌರೀರ ನಿರನ್ ಮಂದಣ್ಣ ಮಾತನಾಡಿ, ಯಾವುದೇ ಒಪ್ಪಂದಗಳು ಆಟಗಾರರು ಹಾಗೂ ಹಾಕಿಕೂರ್ಗ್ ನಡುವೆ ನಡೆದಿಲ್ಲ. ಈ ನಿಟ್ಟಿನಲ್ಲಿ ಆಟಗಾರರು ಸಹಿಯನ್ನು ಹಾಕಿಲ್ಲ. ಈ ರೀತಿ ಇದ್ದಲ್ಲಿ ತೋರಿಸಿದ್ದಲ್ಲಿ ತಾನು ಹಾಕಿ ಆಟ ಆಡುವುದನ್ನು ತ್ಯಜಿಸುತ್ತೇನೆ ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ಮೂರ್ನಾಡು ಕೊಡವ ಸಮಾಜದ ಕಾರ್ಯದರ್ಶಿ ಕಂಬೀರAಡ ಗೌತಮ್, ಸದಸ್ಯ ಚೌರೀರ ಸೋಮಣ್ಣ, ಶಾಮ್ ಗಣಪತಿ ಇದ್ದರು.