ಮಡಿಕೇರಿ, ಡಿ. ೧: ಕೇರಳ ರಾಜ್ಯದ ೬ ಬಸ್‌ಗಳು ಕರ್ನಾಟಕ ರಾಜ್ಯದ ತೆರಿಗೆ ಪಾವತಿಸದೆ ಪರವಾನಿಗೆ ಪಡೆಯದೆ ವಿದ್ಯಾರ್ಥಿ ಗಳನ್ನು ಕೇರಳ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಕುಟ್ಟಕ್ಕೆ ಬಂದಾಗ ಕೆ. ಟಿ. ಡಿ.ಓ ಸಂಘಟನೆಯ ಪದಾಧಿಕಾರಿಗಳು ಕೇರಳ ರಾಜ್ಯದ ಬಸ್‌ಗಳನ್ನು ತಡೆದು ಸಾರಿಗೆ ಅಧಿಕಾರಿ ಗಳಿಗೆ ವಿಷಯ ತಿಳಿಸಿ ನಂತರ ಮಡಿಕೇರಿ ಆರ್‌ಟಿಓ ಶಿವಕುಮಾರ್ ಸ್ಥಳಕ್ಕೆ ಆಗಮಿಸಿ ವಾಹನಗಳ ದಾಖಲಾತಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದರು. ಪರವಾನಿಗೆ ಇಲ್ಲದೆ ಗಡಿ ಒಳಗೆ ಪ್ರವೇಶಿಸದಂತೆ ತಾಕಿತು ಮಾಡಿ ಮಕ್ಕಳ ಪ್ರವಾಸಕ್ಕೆ ಅನುವು ಮಾಡಿಕೊಟ್ಟರು.
ಕಾರ್ಯಾಚರಣೆ ಸಂದರ್ಭ ಕುಟ್ಟ ವೃತ ನಿರೀಕ್ಷಕ ಮಂಜಪ್ಪ, ಎಸ್. ಐ ಮಹದೇವ್, ಸಿಬ್ಬಂದಿಗಳು, ಹಾಗೂ ಕೆಟಿಡಿಓ ಸಂಘಟನೆಯ ಪದಾಧಿಕಾರಿ ಗಳಾದ ಹೇಮಂತ್, ಪರಶುರಾಮ್, ರಫೀಕ್, ಯಶ್ವಂತ್ ಮತ್ತಿತರು ಉಪಸ್ಥಿತರಿದ್ದರು.