(ವಿಶೇಷ ವರದಿ, ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಡಿ. ೧: ದಕ್ಷಿಣ ಕೊಡಗಿನಲ್ಲಿ ಆಗಿಂದಾಗ್ಗೆ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ದಿನದಲ್ಲಿ ಹುಲಿ ಹಾವಳಿಯಿಂದ ರೈತರ ಜಾನುವಾರುಗಳನ್ನು ರಕ್ಷಣೆ ಮಾಡಲು ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನಲ್ಲಿರುವ, ಹುಲಿ ಓಡಾಟ ಪ್ರದೇಶದ ಸುತ್ತ ಮುತ್ತಲಿನ ಆಯ್ದ ರೈತ ಕುಟುಂಬಗಳಿಗೆ ಇಲಾಖೆ ವತಿಯಿಂದ ಜಾನುವಾರು ಕೊಟ್ಟಿಗೆ ನಿರ್ಮಾಣಕ್ಕೆ ಮುಂದಾಗಿದೆ.

ವಿಶೇಷವಾಗಿ ದ.ಕೊಡಗಿನಲ್ಲಿ ಹುಲಿ ಹಾವಳಿಯಿಂದ ರೈತರ ಜಾನುವಾರುಗಳು ಸಾವಿಗೀಡಾಗುತ್ತಿ ರುವ ಹಿನ್ನೆಲೆಯಲ್ಲಿ ರೈತ ಸಂಘ ಸೇರಿದಂತೆ ಗ್ರಾಮಸ್ಥರು ಇಲಾಖೆಯ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕುವ ಮೂಲಕ ಹಲವು ಬಾರಿ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ರೈತರಿಗೆ ಸೂಕ್ತವಾದ ಜಾನುವಾರು ಕೊಟ್ಟಿಗೆ ಇಲ್ಲದೆ ಇರುವುದರಿಂದ ತಮ್ಮ ಜಾನುವಾರುಗಳನ್ನು ಸಂಜೆಯ ವೇಳೆ ಮನೆಯ ಸಮೀಪ ಹಾಗೂ ಭತ್ತದ ಗದ್ದೆಗಳಲ್ಲಿ ಕಟ್ಟಿ ಹಾಕುತ್ತಿದ್ದರು. ಹುಲಿಗಳು ಅರಣ್ಯದಿಂದ ಗ್ರಾಮೀಣ ಭಾಗದ ಪ್ರದೇಶಕ್ಕೆ ಆಗಮಿಸಿದ ವೇಳೆ ಸುಲಭವಾಗಿ ರೈತರ ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗುತ್ತಿ ದ್ದವು. ಜಾನುವಾರುಗಳನ್ನು ನಂಬಿಕೊAಡು ಜೀವನ ಸಾಗಿಸುತ್ತಿರುವ ರೈತರಿಗೆ ಇದರಿಂದ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದರು. ಇಲಾಖೆಯು ನೀಡುತ್ತಿದ್ದ ಪರಿಹಾರದ ಹಣದಲ್ಲಿ ಹೊಸ ತಳಿಯ ಹಸುಗಳನ್ನು ಖರೀದಿಸಲು ರೈತನಿಗೆ ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ರೈತನಿಗೆ ಮರಳಿ ಜಾನುವಾರನ್ನು ಖರೀದಿಸಲು ಸಾಧ್ಯವಾಗದೇ ಹೈನುಗಾರಿಕೆಯ ವೃತ್ತಿಯನ್ನು ರೈತನು ಕಡಿಮೆ ಮಾಡುತ್ತಲೇ ಬರುತ್ತಿದ್ದಾನೆ. ಇದೀಗ ಕೊಡಗು ಜಿಲ್ಲಾ ಸಿಸಿಎಫ್ ಬಿ.ಎನ್.ಎನ್. ಮೂರ್ತಿ ಜಿಲ್ಲೆಗೆ ಆಗಮಿಸಿದ ನಂತರ ಹುಲಿ ದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವುದನ್ನು ಹತೋಟಿಗೆ ತರಲು ಅರಣ್ಯದಂಚಿನ ರೈತರಿಗೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಕೊಟ್ಟಿಗೆ ನಿರ್ಮಾಣಕ್ಕೆ ಮುಂದಾಗಿ ದ್ದಾರೆ. ಕೊಟ್ಟಿಗೆ ನಿರ್ಮಾಣದ ವಿಚಾರದಲ್ಲಿ ಸಿಸಿಎಫ್ ವಿಶೇಷ ಆಸಕ್ತಿ ವಹಿಸಿದ್ದು ದ.ಕೊಡಗಿನಲ್ಲಿ ಅರ್ಹ ರೈತರಿಗೆ ೪೦ ಕೊಟ್ಟಿಗೆಗಳನ್ನು ನಿರ್ಮಿಸಲು ಆದೇಶ ಹೊರಡಿಸಿದ್ದಾರೆ. ಪ್ರತಿ ಕೊಟ್ಟಿಗೆಗೆ ಇಲಾಖೆಯ ಸುತ್ತೋಲೆಯಂತೆ ೨ ಲಕ್ಷ ಅನುದಾನವು ಮಂಜೂರಾಗಲಿದ್ದು ಇದರ ಅರ್ಧ ಭಾಗವನ್ನು ರೈತರು ಭರ್ತಿ ಮಾಡಿ ಕೊಳ್ಳಬೇಕಾಗಿದೆ.

(ಮೊದಲ ಪುಟದಿಂದ)

ಇಲಾಖೆಯು ಸೂಚಿಸಿದ ನೀಲಿನಕ್ಷೆಯಂತೆ ಕೊಟ್ಟಿಗೆ ನಿರ್ಮಾಣ ಮಾಡುವುದು ಕಡ್ಡಾಯವಾಗಿದೆ. ಇತ್ತೀಚೆಗೆ ಮಡಿಕೇರಿಯ ಅರಣ್ಯ ಭವನದಲ್ಲಿ ರೈತರೊಂದಿಗೆ ನಡೆದ ಸಭೆಯಲ್ಲಿ ಸಿಸಿಎಫ್ ಬಿ.ಎನ್.ಎನ್. ಮೂರ್ತಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ತಿತಿಮತಿಯ ಪ್ರವಾಸಿ ಮಂದಿರದಲ್ಲಿ ಆಯೋಜನೆಗೊಂಡಿದ್ದ ಅಧಿಕಾರಿಗಳ ಹಾಗೂ ರೈತರ, ಕಾರ್ಮಿಕರ ಸಭೆಯಲ್ಲಿ ಈ ವಿಚಾರದ ಬಗ್ಗೆ ಸಭೆಯಲ್ಲಿದ್ದ ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದು ಆದಷ್ಟು ಬೇಗನೇ ಅಗತ್ಯವಿರುವ ರೈತರು ಜಾನುವಾರು ಕೊಟ್ಟಿಗೆಯನ್ನು ನಿರ್ಮಿಸಿ ಕೊಳ್ಳುವಂತೆ ಅಗತ್ಯವಿದ್ದಲ್ಲಿ ಇಲಾಖೆಯ ಸಿಬ್ಬಂದಿಗಳ ಸಹಾಯ ಪಡೆಯುವಂತೆ ಮನವಿ ಮಾಡಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಹುಲಿಗಳು ರಾಷ್ಟಿçÃಯ ಉದ್ಯಾನವನದ ಸಮೀಪದಲ್ಲಿರುವ ರೈತರ ಕಾಫಿ ತೋಟಗಳಿಗೆ ಹಾಗೂ ಜಾನುವಾರುಗಳ ಬಳಿಗೆ ಹುಲಿಗಳು ತೆರಳಬಹುದು ಎಂಬ ಉದ್ದೇಶದಿಂದ ರೈತರ ಜಾನು ವಾರುಗಳನ್ನು ಸಂರಕ್ಷಿಸಿ ಕೊಳ್ಳಲು ಇಲಾಖೆಯು ರೈತರಿಗೆ ಸಬ್ಸಿಡಿ ರೂಪದಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಮುಂದಾಗಿದೆ.