ಸೋಮವಾರಪೇಟೆ, ಡಿ. ೧: ಇಲ್ಲಿನ ಸಂತ ಜೋಸೆಫರ ವಿದ್ಯಾ ಸಂಸ್ಥೆಯಲ್ಲಿ ೬೭ನೇ ಕನ್ನಡ ರಾಜ್ಯೋತ್ಸ ವವನ್ನು ಸಂಭ್ರಮದಿAದ ಆಚರಿಸಲಾಯಿತು.
ಧರ್ಮ ಗುರುಗಳಾದ ರಾಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡವನ್ನು ಮಾತನಾಡಿದರೆ ಮಾತ್ರ ಭಾಷೆ ಬೆಳೆಯುತ್ತದೆ. ಕನ್ನಡ ಸಾಹಿತ್ಯಾಭ್ಯಾಸದಿಂದ ಮಕ್ಕಳು ಹೆಚ್ಚಿನ ಜ್ಞಾನ ಸಂಪಾದಿಸಬಹುದು. ಕನ್ನಡೇತರರಿಗೆ ಭಾಷೆ ಕಲಿಸುವುದಕ್ಕೆ ಎಲ್ಲರೂ ಪ್ರಯತ್ನ ಪಡಬೇಕು ಎಂದರು. ಧರ್ಮಗುರುಗಳಾದ ಅಂತೋಣಿ ರಾಜ್, ಜೋಸೆಫ್ ಮರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಆರ್.ಎಫ್.ಓ. ಗಾನಶ್ರೀ, ಜೇಸಿ ನಿಯೋಜಿತ ಅಧ್ಯಕ್ಷೆ ಎಂ.ಎ. ರುಬೀನಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ, ಡಿಸಿಲ್ವಾ, ಜೇಸಿ ಸಂಸ್ಥೆ ಅಧ್ಯಕ್ಷ ನೆಲ್ಸನ್ ಡಿಸೋಜ, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನೃತ್ಯ, ಕನ್ನಡ ಗೀತ ಗಾಯನ ನಡೆಯಿತು.