ಸೋಮವಾರಪೇಟೆ, ನ. ೩೦: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾನ್ವೆಂಟ್ ಬಾಣೆಯ ಹೌಸಿಂಗ್ ಬೋರ್ಡ್ಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ಇದು ರಸ್ತೆಯೋ ಅಥವಾ ಕೆಸರಿನ ಕೊಂಪೆಯೋ ಎಂಬ ಅನುಮಾನ ಮೂಡುವಂತೆ ಮಾಡಿದೆ.

ಕಳೆದ ಅನೇಕ ದಶಕಗಳಿಂದ ಈ ರಸ್ತೆಯ ಅಭಿವೃದ್ಧಿ ಮರೀಚಿಕೆ ಯಾಗಿದ್ದು, ಸ್ಥಳೀಯಾಡಳಿತದಿಂದ ಹಿಡಿದು ಅಧಿಕಾರಿ ವರ್ಗದ ಕುರುಡುತನಕ್ಕೆ ರಸ್ತೆ ಬಲಿಯಾಗಿದೆ. ಮೊದಲೇ ಏರು ರಸ್ತೆಯಾಗಿದ್ದು, ಗುಂಡಿಗಳನ್ನು ಮುಚ್ಚದ ಹಿನ್ನೆಲೆ ಇದೀಗ ಡಾಂಬರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಮಧ್ಯಭಾಗದಿಂದ ಎರಡೂ ಬದಿಯಲ್ಲಿ ಗುಂಡಿಗಳು ನಿರ್ಮಾಣ ವಾಗಿದ್ದು, ವಾಹನ ಸಂಚಾರ ಸರ್ಕಸ್‌ನಷ್ಟೇ ತ್ರಾಸದಾಯಕವಾಗಿದೆ. ಆಟೋಗಳಂತೂ ಇತ್ತ ಮುಖ ಮಾಡುತ್ತಿಲ್ಲ. ಅನಾರೋಗ್ಯ ಪೀಡಿತರಿದ್ದರೆ ಬಳಸು ದಾರಿಯೇ ಗತಿ ಎಂಬAತಾಗಿದೆ.

ಹೌಸಿAಗ್ ಬೋರ್ಡ್ನಲ್ಲಿ ಸುಮಾರು ೪೦ಕ್ಕೂ ಅಧಿಕ ಮನೆಗಳಿದ್ದು, ಹಾನಗಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೇಣುಕಾ ಹಾಗೂ ಯಶಸ್ವಿನಿ, ಮುರುಳೀಧರ್ ಅವರುಗಳ ಮನೆಗೆ ತೆರಳುವ ಸಾರ್ವಜನಿಕ ರಸ್ತೆಯ ಸ್ಥಿತಿ ಆಟೋಗಳಂತೂ ಇತ್ತ ಮುಖ ಮಾಡುತ್ತಿಲ್ಲ. ಅನಾರೋಗ್ಯ ಪೀಡಿತರಿದ್ದರೆ ಬಳಸು ದಾರಿಯೇ ಗತಿ ಎಂಬAತಾಗಿದೆ.

ಹೌಸಿAಗ್ ಬೋರ್ಡ್ನಲ್ಲಿ ಸುಮಾರು ೪೦ಕ್ಕೂ ಅಧಿಕ ಮನೆಗಳಿದ್ದು, ಹಾನಗಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೇಣುಕಾ ಹಾಗೂ ಯಶಸ್ವಿನಿ, ಮುರುಳೀಧರ್ ಅವರುಗಳ ಮನೆಗೆ ತೆರಳುವ ಸಾರ್ವಜನಿಕ ರಸ್ತೆಯ ಸ್ಥಿತಿ ಅನುದಾನ ಮೀಸಲಿಡುವ ಬದಲಿಗೆ ಖುದ್ದು ಸ್ಥಳ ಪರಿಶೀಲನೆ ಮಾಡಿ ರಸ್ತೆಗೆ ಹಣ ಮೀಸಲಿಡುವ ಮೂಲಕ ಸಾರ್ವಜನಿಕರಿಗೆ ಕನಿಷ್ಟ ನ್ಯಾಯ ಒದಗಿಸಬೇಕಿದೆ.

ರಸ್ತೆ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆಟೋಗಳು, ದ್ವಿಚಕ್ರ ವಾಹನಗಳು ಸಂಚರಿಸಲು ಅಸಾಧ್ಯವಾದ ರಸ್ತೆ ಇದಾಗಿದೆ. ರಾತ್ರಿ ವೇಳೆಯಲ್ಲಂತೂ ನಡೆದುಕೊಂಡು ಹೋಗುವುದೇ ಕಷ್ಟ. ಚೆನ್ನಾಗಿರುವ ರಸ್ತೆಗಳಿಗೆ ಮತ್ತೆ ಮತ್ತೆ ಹಣ ಬಿಡುಗಡೆ ಮಾಡುವ ಮೂಲಕ ಅಧಿಕಾರಿಗಳು ಯಾರ ಜೇಬು ತುಂಬಿಸಲು ಹೊರಟಿದ್ದಾರೋ ತಿಳಿಯುತ್ತಿಲ್ಲ! ಆದಷ್ಟು ಬೇಗ ಈ ರಸ್ತೆಯನ್ನು ದುರಸ್ತಿ ಪಡಿಸಬೇಕು. ತಪ್ಪಿದ್ದಲ್ಲಿ ಸ್ಥಳೀಯ ನಿವಾಸಿಗಳು ಇಲಾಖಾ ಕಚೇರಿ ಎದುರು ಧರಣಿ ಕೂರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.