ಚೆಟ್ಟಳ್ಳಿ, ನ. ೩೦: ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ವಲಯ, ನಲ್ವತ್ತೇಕರೆ ಶಾದಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ, ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ನೆಲ್ಲಿಹುದಿಕೇರಿ ಯೂನಿಟ್ ಪ್ರಥಮ, ನಲ್ವತ್ತೇಕರೆ ಯೂನಿಟ್ ದ್ವಿತೀಯ ಹಾಗೂ ಕಂಡಕರೆ ಯೂನಿಟ್ ತೃತೀಯ ಸ್ಥಾನ ಪಡೆದುಕೊಂಡಿದೆ.

ನೆಲ್ಲಿಹುದಿಕೇರಿ ೮೭ ಅಂಕ, ನಲ್ವತ್ತೇಕರೆ ೮೫ ಹಾಗೂ ಕಂಡಕರೆ ಯೂನಿಟ್ ೭೧ ಅಂಕಗಳನ್ನು ಪಡೆಯಿತು. ಒಟ್ಟು ಹದಿನೈದಕ್ಕೂ ಹೆಚ್ಚು ಯೂನಿಟ್‌ಗಳ ನಡುವೆ ನಡೆದ ಇಸ್ಲಾಮಿಕ್ ಕಲೋತ್ಸವದಲ್ಲಿ ೨೦೦ಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಿದ್ದವು. ಜನರಲ್ ಸಬ್ ಜೂನಿಯರ್,ಜನರಲ್ ಜೂನಿಯರ್, ಜನರಲ್ ಸೀನಿಯರ್ ಹಾಗೂ ಜನರಲ್ ಸೂಪರ್ ಸೀನಿಯರ್ ಒಟ್ಟು ೪ ವಿಭಾಗಗಳಲ್ಲಿ ೭೫ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳು ನಡೆಯಿತು. ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು ಡಿಸೆಂಬರ್ ೧೧ ರಂದು ಕುಶಾಲನಗರದಲ್ಲಿ ನಡೆಯಲಿರುವ ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಇಸ್ಲಾಮಿಕ್ ಕಲೋತ್ಸವದ ತೀರ್ಪುಗಾರರಾಗಿ ಅಹ್ಮದ್ ಕಬೀರ್ ಪೈಝಿ, ಜಂಶಾದ್ ಮುಸ್ಲಿಯಾರ್, ಹಮೀದ್ ದಾರಿಮಿ ಹಾಗೂ ಯಮಾನಿ ಕಾರ್ಯನಿರ್ವಹಿಸಿದರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಸ್.ಕೆ.ಎಸ್.ಎಸ್.ಎಫ್. ನಾಯಕರುಗಳಾದ ಸಮೀರ್ ಸಿದ್ದಾಪುರ, ಹುಸೈನ್ ಅಝ್ಹರಿ ಕಂಡಕರೆ, ಜಂಶಾದ್ ಉಸ್ತಾದ್, ಅಹ್ಮದ್ ಕಬೀರ್ ಫೈಝಿ, ನಲ್ವತ್ತೇಕರೆ ಮಹಲ್ ಖತೀಬ್ ಹುಸೈಮ್ ಹುಸೈನ್ ಅಝ್ಹರಿ, ಉಮ್ಮರ್ ಉಸ್ತಾದ್, ಬಶೀರ್ ಕೊಂಡAಗೇರಿ, ಕರೀಮ್ ಉಸ್ತಾದ್, ಜಾಫರ್ ನಲ್ವತ್ತೇಕರೆ ಹಾಗೂ ಶಿಯಾಬ್ ಇದ್ದರು.