*ಗೋಣಿಕೊಪ್ಪ, ನ. ೨೭: ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದಿAದ ಸಹಕಾರ ಅಂಗಡಿ ಉದ್ಘಾಟನೆ ಶುಕ್ರವಾರ ನಡೆಯಿತು. ಸಂಘದ ಮಾಜಿ ನಿರ್ದೇಶಕ ಎಚ್.ಟಿ. ಉಮೇಶ್ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ರಾಮಕೃಷ್ಣ ಮಾತನಾಡಿ, ಸಂಘದ ೮೮ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಅಂಗಡಿ ತೆರೆಯಲಾಗಿದೆ. ವಿವಿಧ ಸಹಕಾರ ಸಂಘಗಳ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಇದರಿಂದ ಸಹಕಾರ ಸಂಘಗಳ ಉತ್ಪನ್ನಗಳಿಗೆ ಬೆಂಬಲ ನೀಡಿದಂತಾಗುತ್ತದೆ. ಕ್ಯಾಂಪ್ಕೋ, ಭಾಗಮಂಡಲ ಪ್ರಗತಿಪರ ಜೇನು ಉತ್ಪಾದಕರ ಸಂಘ, ಕೊಡಗು ಏಲಕ್ಕಿ ಸೊಸೈಟಿ, ಕೊಡಗು ಕಾಫಿ ಸೊಸೈಟಿ, ಕೊಡಗು ಕಿತ್ತಳೆ ಬೆಳೆಗಾರರ ಸಂಘ, ಸ್ತಿçÃಶಕ್ತಿ ಮತ್ತು ಸ್ವಸಹಾಯ ಸಂಘಗಳ ಗುಣಮಟ್ಟದ ಉತ್ಪನ್ನ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಮಾಜಿ ಅಧ್ಯಕ್ಷ ಚೆಕ್ಕೇರ ಸೋಮಯ್ಯ ಮಾಜಿ ನಿರ್ದೇಶಕ ಬಿ. ಬಿ. ಚಂಗಪ್ಪ ಮಾತನಾಡಿದರು. ಹೆದ್ದಾರಿ ಸಮೀಪ ೫೧ ಸೆಂಟ್ ಜಾಗ ಖರೀದಿಸಿ ಬಹು ಸೇವಾ ಕೇಂದ್ರ ತೆರೆಯಲಾಗುವುದು ಎಂದು ಈ ಸಂದರ್ಭ ಪ್ರಕಟಿಸಲಾಯಿತು. ಉಪಾಧ್ಯಕ್ಷ ಪಾಲೇಂಗಡ ಮನು ನಂಜಪ್ಪ, ನಿರ್ದೇಶಕಿ ಲಕ್ಷ÷್ಮಮ್ಮ, ಸಿಇಒ ವಿ.ಎಸ್. ಸುಬ್ರಮಣಿ ಇದ್ದರು.