ವೀರಾಜಪೇಟೆ, ನ. ೨೭ : ಒಂದು ದಿನದ ಮಟ್ಟಿಗೆ ಶಾಲೆಯ ಆವರಣ, ಅಕ್ಷರಶಃ ಸಂತೆಯ ವಾತಾವರಣವಾಗಿ ಪರಿವರ್ತನೆಯಾಗಿತ್ತು. ಶಾಲೆಯ ಮಕ್ಕಳೆಲ್ಲಾ ತರಕಾರಿ ಸೊಪ್ಪು ಸೇರಿದಂತೆ ವಿವಿಧ ಖಾದ್ಯಗಳ ಮಾರಾಟ ಮಾಡುವ ವ್ಯಾಪರಸ್ಥರಾಗಿದ್ದರು. ಪೋಷಕರು ಗ್ರಾಹಕರಾಗಿದ್ದರು. ನಾ ಮುಂದು, ತಾ ಮುಂದು ಎಂಬAತೆ ಖರೀದಿ ಮಾಡಿದರು. ವೀರಾಜಪೇಟೆಗೆ ಸಮೀಪದ ಆರ್ಜಿ ಗ್ರಾಮದ ಕಲ್ಲುಬಾಣೆ ಬದ್ರಿಯಾ ಶಾಲೆಯಲ್ಲಿ, ಶಾಲೆಯ ಮಕ್ಕಳಿ ಗಾಗಿಯೇ ವಿಭಿನ್ನ, ವಿಶೇಷವಾಗಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ತಾಜಾ ಸೊಪ್ಪು, ಮನೆಯಲ್ಲಿ ಬೆಳಸಿದ ತರಕಾರಿ, ಹಣ್ಣುಗಳು, ಮಕ್ಕಳಿಂದಲೇ ತಯಾರಿಸಲ್ಪಟ್ಟ ಐಸ್‌ಕ್ರೀಂ, ಬೋಂಡ, ಬಜ್ಜಿ, ಫ್ರೂಟ್ ಸಲಾಡ್ ಆಕರ್ಷಣೀಯವಾಗಿತ್ತು. ಮಕ್ಕಳಲ್ಲಿ ಕಂಡು ಬಂದ ಸ್ಪರ್ಧಾತ್ಮಕ ಮನೋಭಾವ ಗ್ರಾಹಕರ ಗಮನ ಸೆಳೆಯಿತು. ಮಕ್ಕಳಲ್ಲಿ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗೆ ಒಡನಾಟದ ಕೌಶಲ್ಯವನ್ನು ಕಲಿಸುವುದ ರೊಂದಿಗೆ, ಅವರಲ್ಲಿ ಸೃಜನಶೀಲತೆ ಯನ್ನು ಅನಾವರಣಗೊಳಿಸುವ ಉದ್ದೇಶದಿಂದ, ಈ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಚಿಣ್ಣರು, ಗ್ರಾಹಕರ ಬಳಿ ಹಣ ಪಡೆದು ವ್ಯಾಪಾರ-ವಹಿವಾಟು ನಡೆಸಿದ್ದು, ಸೂಪರ್ ಆಗಿತ್ತು. ಮಕ್ಕಳು ವ್ಯಾಪಾರ ಮಾಡಿ ಸಖತ್ ಖುಷಿ ಪಟ್ಟು ಎಂಜಾಯ್ ಮಾಡಿದರು.

ಮಕ್ಕಳಲ್ಲಿ ಪಾಠ-ಆಟದ ಜೊತೆಗೆ, ಈ ರೀತಿ ವ್ಯವಹಾರಿಕ ಜ್ಞಾನವೂ ಬೆಳೆಸುವ ಉದ್ದೇಶದಿಂದ ಶಾಲೆ ಶಿಕ್ಷಕರು, ಆಯೋಜಿಸಿದ್ದ ಸಂತೆ ವ್ಯಾಪಾರ ಅರ್ಥಗರ್ಭಿತವಾಗಿತ್ತು. ಆಟ, ಪಾಠಗಳಿಗಷ್ಟೇ ಸೀಮಿತವಾಗದೇ, ಮಕ್ಕಳ ಸಂತೆ ಮೂಲಕ ಮಾಡಿಸುವ ಮೂಲಕ ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರಹಾಕುವ ವಿಭಿನ್ನ-ವಿಶೇಷ ಪ್ರಯತ್ನ ಮಾಡಲಾಯಿತು. ಬದ್ರಿಯಾ ಶಾಲೆ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಹಾಗೂ ಕಾರ್ಯದರ್ಶಿ ಜಾಫರ್ ಮಕ್ಕಳ ಸಂತೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಮುಖ್ಯೋಪದ್ಯಾಯ ಮಹದೇವ್ ವಿದ್ಯಾರ್ಥಿಗಳಿಗೆ ಲಾಭ ನಷ್ಟದ ಪರಿಚಯ, ವ್ಯವಹಾರ ಜ್ಞಾನ, ಸ್ವಚ್ಛತೆಯ ಪರಿಕಲ್ಪನೆ ಮೂಡಿಸಲು ಮಕ್ಕಳ ಸಂತೆ ಉಪಯುಕ್ತವಾಗುತ್ತದೆ. ಶಾಲೆಗಳಲ್ಲಿ ಆಟ-ಪಾಠದ ಜೊತೆಗೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಮುಂಬರುವ ದಿನಗಳಲ್ಲಿ ತಮ್ಮ ಬದುಕು ಹೇಗೆ ಕಟ್ಟಿಕೊಳ್ಳಬೇಕೆಂಬ ಬಗ್ಗೆ ಅನುಭವ ದೊರೆತಂತಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಪಿಡಿಒ ಶಪೀಕ್ ಮಾತನಾಡಿ ಇಂತಹ ಕಾರ್ಯಕ್ರಮದ ಬಗ್ಗೆ ಮಕ್ಕಳಿಗೆ ಕಲಿಸಿದರೆ ಅವರ ಜೀವನ ಕಟ್ಟಿಕೊಳ್ಳಲು ಅನುಭವ ಬಂದAತಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಏರ್ಪಡಿಸಿದರೆ ಮಕ್ಕಳಿಗೆ ಹೊಸ ಅನುಭವ ದೊರೆಯುತ್ತದೆ ಎಂದು ಹೇಳಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಖಜಾಂಚಿ ಸಿರಾಜ್, ಸಿ.ಎಂ. ನೌಷದ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರುಗಳು, ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.