ಮಡಿಕೇರಿ, ನ. ೨೭: ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ರಿ ಹಾಗೂ ಕೊಡಗು ವೈದ್ಯಕೀಯ ಕಾಲೇಜು ಮಡಿಕೇರಿಯ ಸಂಯುಕ್ತ ಆಶ್ರಯದಲ್ಲಿ ಶ್ರವಣ ದೋಷ ತಪಾಸಣೆ ಶಿಬಿರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆಯಲ್ಲಿ ಏರ್ಪಡಿಸ ಲಾಯಿತು. ಈ ಸಂದರ್ಭ ಸುಮಾರು ೭೮ ಜನರಿಗೆ ಆಡಿಟರಿ ಸ್ಕಿçÃನಿಂಗ್ ಮಾಡಲಾಯಿತು. ಶಿಬಿರದಲ್ಲಿ ಶೇಕಡ ೪೫%ಕ್ಕಿಂತ ಹೆಚ್ಚಿನ ಶ್ರವಣ ಸಮಸ್ಯೆ ಇರುವ ೩೬ ಜನರಿಗೆ ಸ್ಥಳದಲ್ಲೇ ವಿಶೇಷ ಚೇತನರ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲಾಯಿತು ಮತ್ತು ಉಚಿತವಾಗಿ ಶ್ರವಣಯಂತ್ರ ಕೊಡಲು ನೋಂದಣಿ ಮಾಡ ಲಾಯಿತು. ಈ ಸಂದರ್ಭ ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ವಿಶ್ವನಾಥ್ ಸಿ.ವಿ. ಹಾಗೂ ವೈದ್ಯಾಧಿಕಾರಿ ಡಾ. ಅಶೋಕ್, ಕೊಡಗು ವೈದ್ಯಕೀಯ ಕಾಲೇಜಿನ ಪಂಚಮ್ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ವಿಶೇಷಚೇತನರ ಕಲ್ಯಾಣ ಅಧಿಕಾರಿ ವಿಮಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ಸಿಬ್ಬಂದಿಗಳು ಹಾಜರಿದ್ದರು.