ಸೋಮವಾರಪೇಟೆ, ನ. ೨೭: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು ಅವರು ಕ್ರೀಡಾಕೂಟ ಉದ್ಘಾಟಿಸಿದರು. ನಂತರ ಮಾತನಾಡಿ ಗ್ರಾಮೀಣ ಭಾಗದ ಜನರಲ್ಲಿನ ಕೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗ ಲಿವೆ. ಗ್ರಾಮೀಣ ಆಟಗಳು ನಶಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ರಶೀದಾ, ಸದಸ್ಯರುಗಳಾದ ಗೋಪಾಲಕೃಷ್ಣ, ರುದ್ರಪ್ಪ, ಅನುಕುಮಾರ್, ಶಂಕರ್, ಪ್ರಮೀಳ, ವೀಣಾ, ಭಾಗ್ಯ, ಪಿ.ಡಿ.ಓ. ಹರೀಶ್ ಇದ್ದರು ಪುರುಷರ ವಿಭಾಗದ ವಾಲಿಬಾಲ್‌ನಲ್ಲಿ ದೊಡ್ಡಮಳ್ತೆ ಎ ತಂಡ ಪ್ರಥಮ, ದೊಡ್ಡಮಳ್ತೆ ಬಿ. ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ದೊಡ್ಡಹಣಕೋಡು ಮಹಿಳಾ ತಂಡ ಪ್ರಥಮ, ದ್ವಿತೀಯ ಸ್ಥಾನವನ್ನು ದೊಡ್ಡಮಳ್ತೆ ಗ್ರಾಮ ತಂಡ ಪಡೆಯಿತು.
ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಬಸವೇಶ್ವರ ಯುವಕ ಸಂಘ ದೊಡ್ಡಹಣಕೋಡು ಪ್ರಥಮ ಹಾಗು ದ್ವಿತೀಯ ಸ್ಥಾನವನ್ನು ದೊಡ್ಡಹಣಕೋಡು ಬಿ ತಂಡ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ದೊಡ್ಡಮಳ್ತೆ ತಂಡ ಪ್ರಥಮ, ದೊಡ್ಡಹಣಕೋಡು ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.