ಶ್ರೀ ರಾಮಲಿಂಗ ಚೌಡೇಶ್ವರಿ ಮಹಿಳಾ ಸಮಾಜವು ಮಕ್ಕಳ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಿತು. ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಸಭಾ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಟಾಣಿ ದರ್ಶಿನಿ ಜಗದೀಶ್ ವಹಿಸಿದ್ದರು. ಮಾಸ್ಟರ್ ವಿಘ್ನೇಶ್ ಸುಜಯ್ ನಿರೂಪಿಸಿ, ಕೃಪಾ ಲೋಕೇಶ್ ಪ್ರಾರ್ಥನೆ ಮಾಡಿದರು. ಹಂಸಿಣಿ ಜಗದೀಶ್ ಸ್ವಾಗತಿಸಿದರು ನಂತರ ಎಲ್ಲರೂ ಒಟ್ಟಾಗಿ ನಾಡಗೀತೆ ಹಾಡಿದರು. ಪುಟಾಣಿ ವಿಹಾನ್ ಸುಜಯ್ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದರು.ಮಕ್ಕಳ ದಿನಾಚರಣೆಯ ವಿಶೇಷತೆಯನ್ನು ಕುಮಾರಿ ಕಾವೇರಿ ಅನಿಲ್ ವಿವರವಾಗಿ ತಿಳಿಸಿಕೊಟ್ಟರು . ಮುಖ್ಯ ಅತಿಥಿಗಳಾದ ಆರ್ನವ್ ಅನಿಲ್ ಒಂದೆರಡು ಮಾತಾಡಿದರು, ಮೋಹಿತ್ ಪ್ರಕಾಶ್ ಚಾ ಚಾ ನೆಹರೂ ರವರ ಕೂಲಂಕಷ ಪರಿಚಯ ಮಾಡಿಕೊಟ್ಟರು. ದೀಕ್ಷಾ ನಾಗೇಶ್ ದೇಶ ಭಕ್ತಿ ಗೀತೆಯನ್ನು, ವಿಘ್ನೇಶ್ ಸುಜಯ್ ಶಾಸ್ತಿçÃಯ ಸಂಗೀತವನ್ನು, ಶಿವಾನಿ ಅರವಿಂದ್ ಶ್ಲೋಕವನ್ನು ಹಾಗು ಆಯುಷಿ ಗಿರೀಶ್ ಚಿತ್ರಗೀತೆಗಳನ್ನು ಹಾಡಿದರು. ದರ್ಶಿನಿ ಜಗದೀಶ್ ಅಧ್ಯಕ್ಷರ ಭಾಷಣ ಮಾಡಿದರು. ದೀಕ್ಷಾ ನಾಗೇಶ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಆಡಳಿತ ಮಂಡಳಿಯವರು ಮತ್ತು ಸದಸ್ಯೆಯರು ಉಪಸ್ಥಿತರಿದ್ದರು, ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಕೊನೆಗೊಂಡಿತು. ನಂತರ ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ಲಘು ಉಪಹಾರದೊಂದಿಗೆ ಮುಕ್ತಾಯಗೊಂಡಿತು.