ಗೋಣಿಕೊಪ್ಪಲು, ನ.೨೭ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ನಾಗರಿಕ ಮತದಾನದಿಂದ ಹೊರಗುಳಿಯದಂತೆ ವಿಶೇಷವಾಗಿ ಗಿರಿಜನರು, ಆದಿವಾಸಿಗಳು ಮತದಾನದಿಂದ ವಂಚಿತರಾಗದAತೆ ಎಚ್ಚರ ವಹಿಸುವ ಸಲುವಾಗಿ ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳ ಸಹಯೋಗ ದಲ್ಲಿ ಲೈನ್ ಮನೆ ಸೇರಿದಂತೆ ತಾಲೂಕಿನ ೩೨೦ ಹಾಡಿಗಳಲ್ಲಿ ಮತದಾನದ ಹಕ್ಕನ್ನು ಪಡೆಯಲು ಜಾಗೃತಿ ಕಾರ್ಯಕ್ರಮವನ್ನು ಗೋಣಿಕೊಪ್ಪಲು, ನ.೨೭ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ನಾಗರಿಕ ಮತದಾನದಿಂದ ಹೊರಗುಳಿಯದಂತೆ ವಿಶೇಷವಾಗಿ ಗಿರಿಜನರು, ಆದಿವಾಸಿಗಳು ಮತದಾನದಿಂದ ವಂಚಿತರಾಗದAತೆ ಎಚ್ಚರ ವಹಿಸುವ ಸಲುವಾಗಿ ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳ ಸಹಯೋಗ ದಲ್ಲಿ ಲೈನ್ ಮನೆ ಸೇರಿದಂತೆ ತಾಲೂಕಿನ ೩೨೦ ಹಾಡಿಗಳಲ್ಲಿ ಮತದಾನದ ಹಕ್ಕನ್ನು ಪಡೆಯಲು ಜಾಗೃತಿ ಕಾರ್ಯಕ್ರಮವನ್ನು ಮತದಾನದಲ್ಲಿ ಭಾಗವಹಿಸುವಂತೆ ತಿಳುವಳಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ.ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ನಿರ್ದೇಶನದಂತೆ ತಾಲೂಕಿನ ಗಿರಿಜನ ಕಲ್ಯಾಣಾಧಿಕಾರಿಗಳಾದ ಗುರುಶಾಂತಪ್ಪ ಅವರು ಈ ಮಹತ್ತರ ಜವಾಬ್ದಾರಿ ಯನ್ನು ನಿಭಾಯಿಸುತ್ತಿದ್ದು ಪ್ರತಿನಿತ್ಯ ತಂಡಗಳು ನಡೆಸುತ್ತಿರುವ ಮತದಾರರ ಪಟ್ಟಿ ಸೇರ್ಪಡೆ
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಖುದ್ದಾಗಿ ಹಾಡಿಗಳಲ್ಲಿ ಭೇಟಿ ನೀಡಿ ಗಿರಿಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಾಡಿಗಳಲ್ಲಿ ಸಂಚರಿಸುತ್ತಿರುವ ತಂಡಗಳು ಹಾಡಿನ ಮೂಲಕ, ಘೋಷಣೆಗಳ ಮೂಲಕ ಮತದಾರರನ್ನು ಗಮನ ಸೆಳೆದು ನಂತರ ಮತದಾನದ ವಿಚಾರವಾಗಿ ಹಾಗೂ ಮತದಾನದ ಹಕ್ಕನ್ನು ಪಡೆಯುವುದರಿಂದ ಉತ್ತಮರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ತಮ್ಮಲ್ಲಿಯೇ ಇರುವುದನ್ನು ಗಿರಿಜನರಿಗೆ,ಆದಿವಾಸಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ೩೨೦ ಹಾಡಿಗಳಲ್ಲಿ ಬಹುತೇಕ ಆದಿವಾಸಿಗಳು ವಾಸಿಸುತ್ತಿರುವುದರಿಂದ ಇವರು ಮತದಾನದಿಂದ ವಂಚಿತರಾಗದAತೆ ಎಚ್ಚರ ವಹಿಸುವುದು ಇಲಾಖೆಯ ಕರ್ತವ್ಯವಾಗಿರುವುದರಿಂದ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿ ಮನೆಗಳಿಗೆ ತೆರಳುವ ತಂಡಗಳು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಪ್ರತಿ ಮನೆಯ ಪೊಟೋ ಸಹಿತ ಮಾಹಿತಿಯನ್ನು ಸಂಜೆಯ ಒಳಗಾಗಿ ಮೊಬೈಲ್ ಮೂಲಕ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸುವುದು ಕಡ್ಡಾಯಗೊಳಿಸಲಾಗಿದೆ. ಪ್ರತಿ ತಂಡದಲ್ಲಿ ಮುಖ್ಯ ಶಿಕ್ಷಕರು,ಸಹಶಿಕ್ಷಕ,ಕಚೇರಿ ಸಿಬ್ಬಂದಿ,ಕAದಾಯ ಇಲಾಖೆ ಸಿಬ್ಬಂದಿ,ಗ್ರಾಮ ಪಂಚಾಯಿತಿ ನೌಕರ, ಅಂಗನವಾಡಿ ಕಾರ್ಯಕರ್ತೆ, ಕೆಲಸ ನಿರ್ವಹಿಸುತ್ತಿದ್ದಾರೆ. ಹಾಡಿಗಳಲ್ಲಿ ಕಾಡಾನೆ ಹಾವಳಿಯ,ವನ್ಯ ಪ್ರಾಣಿಗಳ ಭಯದ ನಡುವೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
೧೮ ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಈಗಾಗಲೇ ವಿರಾಜಪೇಟೆ,ಪೊನ್ನಂಪೇಟೆ ತಾಲೂಕಿನ ಮಜ್ಜಿಗೆಹಳ್ಳ, ಆನೆಕ್ಯಾಂಪ್, ಬೊಮ್ಮಾಡು, ದೇವರಕಾಡು ಪೈಸಾರಿ,ಚೊಟ್ಟೆಪಾರೆ, ದಿಡ್ಡಳ್ಳಿ,ನೆಹರು ಕಾಲೋನಿ, ಅಂಬುಕೋಟೆ, ಬೊಂಬುಕಾಡು, ಅರುವತ್ತೋಕ್ಲು ಸೇರಿದಂತೆ ವಿವಿಧ ಹಾಡಿಗಳಲ್ಲಿ ಮತದಾರರ ಪಟ್ಟಿಗೆ ಸೇರಿಸುವ ಜಾಗೃತಿ ಅಭಿಯಾನ ಯಶಸ್ವಿಯಾಗಿ ಜರುಗಿದೆ. - ಹೆಚ್.ಕೆ ಜಗದೀಶ್