ಗೋಣಿಕೊಪ್ಪಲು, ನ. ೨೭: ಆದಿಪುರಾಣ ಹಾಗೂ ರತ್ನಾಕರವರ್ಣಿ ರಚಿಸಿದ ಭರತೇಶವೈಭವ ಕಾವ್ಯಗಳು ಕನ್ನಡ ಸಾಹಿತ್ಯದ ಮೈಲಿಗಲ್ಲು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿ ವಿದ್ವಾಂಸರಾದ ಡಾ. ರಾಜಪ್ಪ ದಳವಾಯಿ ಉಲ್ಲೇಖಿಸಿದರು.

ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮಂಗಳಗAಗೋತ್ರಿ ಕೊಣಾಜೆ ಹಾಗೂ ಕಾವೇರಿ ಕಾಲೇಜು ಗೋಣಿಕೊಪ್ಪಲು ಕನ್ನಡ ವಿಭಾಗ ಇವರ ಸಹಯೋಗದಲ್ಲಿ ‘ರತ್ನಾಕರವರ್ಣಿ ಭರತೇಶವೈಭವ ಸಾಂಸ್ಕೃತಿಕ ಅನನ್ಯತೆ’ ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ದಳವಾಯಿ, ಭರತೇಶವೈಭವ ಬಹಳ ಮಹತ್ವದ ಶಾಂತಿ ಪ್ರತಿಪಾದನೆಯ ಕಾವ್ಯ. ಭರತ ಮತ್ತು ಬಾಹುಬಲಿಯರ ಯುದ್ಧ ದಲ್ಲೂ ಪಂಪ ಯುದ್ಧ ಆಗದ ರೀತಿ ಯಲ್ಲಿ ನೋಡಿಕೊಂಡ ಜಾಣ್ಮೆಯನ್ನು ತನ್ನ ಮೊದಲ ಕಾವ್ಯದಲ್ಲೇ ಮಾಡಿ ದ್ದಾರೆ. ಅದನ್ನು ಮತ್ತಷ್ಟು ವಿಸ್ತೃತವಾಗಿ ರತ್ನಾಕರವರ್ಣಿ ತನ್ನ ಕಾವ್ಯದಲ್ಲಿ ಶಾಂತಿಯ ಹಾಗೂ ಅಹಿಂಸೆಯ ಮಹತ್ವವನ್ನು ಜೈನ ತತ್ವವನ್ನು ತಮ್ಮ ಕೃತಿಗಳಲ್ಲಿ ಮಹಾಕವಿಗಳು ಪ್ರತಿಪಾದಿಸಿ ದ್ದಾರೆ ಎಂದು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾ ನಿಲಯದ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಹೊಂಗಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ಮಹಾಕವಿ ರತ್ನಾಕರವರ್ಣಿ ಭರತೇಶ ವೈಭವದ ವಿವಿಧ ಆಯಾಮಗಳನ್ನು, ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಅಧ್ಯಯನ ಪೀಠ ಆರು ವರ್ಷಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿ ಎರಡನೇ ಕಾರ್ಯಕ್ರಮವಾಗಿ ನಡೆಯುತ್ತಿದೆ. ಇದರ ಪ್ರಯೋಜನ ಗಳನ್ನು ವಿದ್ಯಾರ್ಥಿಗಳು ತಮ್ಮ ಯಲ್ಲಿ ನೋಡಿಕೊಂಡ ಜಾಣ್ಮೆಯನ್ನು ತನ್ನ ಮೊದಲ ಕಾವ್ಯದಲ್ಲೇ ಮಾಡಿ ದ್ದಾರೆ. ಅದನ್ನು ಮತ್ತಷ್ಟು ವಿಸ್ತೃತವಾಗಿ ರತ್ನಾಕರವರ್ಣಿ ತನ್ನ ಕಾವ್ಯದಲ್ಲಿ ಶಾಂತಿಯ ಹಾಗೂ ಅಹಿಂಸೆಯ ಮಹತ್ವವನ್ನು ಜೈನ ತತ್ವವನ್ನು ತಮ್ಮ ಕೃತಿಗಳಲ್ಲಿ ಮಹಾಕವಿಗಳು ಪ್ರತಿಪಾದಿಸಿ ದ್ದಾರೆ ಎಂದು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾ ನಿಲಯದ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಹೊಂಗಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ಮಹಾಕವಿ ರತ್ನಾಕರವರ್ಣಿ ಭರತೇಶ ವೈಭವದ ವಿವಿಧ ಆಯಾಮಗಳನ್ನು, ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಅಧ್ಯಯನ ಪೀಠ ಆರು ವರ್ಷಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿ ಎರಡನೇ ಕಾರ್ಯಕ್ರಮವಾಗಿ ನಡೆಯುತ್ತಿದೆ. ಇದರ ಪ್ರಯೋಜನ ಗಳನ್ನು ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾನಿಲಯದ ಡಾ. ಚಂದ್ರಶೇಖರ್ ಎನ್.ಆರ್. ಭರತೇಶ ವೈಭವ, ಒಂದು ಮೌಲ್ಯ ಮಾಪನ, ಉಡುಪಿಯ ಡಾ.ವೆಂಕಟೇಶ್ ಹೆಚ್.ಕೆ. ಭರತೇಶವೈಭವ, ಭರತ ಮತ್ತು ಬಾಹುಬಲಿ ಪಾತ್ರಗಳ ಅನನ್ಯತೆ, ಮೈಸೂರು ವಿಶ್ವವಿದ್ಯಾ ನಿಲಯದ ಡಾ.ಮಣಿ ಎಂ. ಭರತೇಶ ವೈಭವ, ಯುದ್ಧ ಮತ್ತು ಶಾಂತಿ ಬೆಳಗಾವಿ ವಿಶ್ವವಿದ್ಯಾನಿಲಯದ ಡಾ.ನಾಗರಾಜು ಪಿ.ಭರತೇಶ ವೈಭವ ಯೋಗಭೋಗ ಕುರಿತು ಗೋಷ್ಠಿ ಯಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ವಿವರ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ.ಕಾವೇರಪ್ಪ, ರಾಷ್ಟಿçÃಯ ವಿಚಾರ ಸಂಕಿರಣವು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿ ರುವುದು ಶ್ಲಾಘನೀಯ. ಕವಿಗಳ ವಿಚಾರಧಾರೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಸಹಾಯವಾಗಲಿದೆ ಎಂದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ.ಎ.ಎಸ್. ಪೂವಮ್ಮ, ಐ.ಕ್ಯೂ.ಎ.ಸಿ. ಸಂಚಾಲಕಿ, ಪ್ರೊ.ಎಂ.ಎಸ್. ಭಾರತಿ, ಉಪಸ್ಥಿತರಿ ದ್ದರು. ವಿದ್ಯಾರ್ಥಿ ಸಿ.ವಿ. ಅನ್ವಿತ್‌ಕುಮಾರ್ ಪ್ರಾರ್ಥಿಸಿ, ಕನ್ನಡ ವಿಭಾಗದ ಉಪನ್ಯಾಸಕ ಡಾ. ಸಿ.ಎಂ. ರೇವತಿ ಸ್ವಾಗತಿಸಿ, ಎಸ್.ಎಂ. ರಜನಿ, ಬಿ.ಬಿ. ಸುನೀಲ್ ನಿರೂಪಿಸಿ, ಎಸ್.ಎಂ. ರಜನಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಕನ್ನಡ ವಿಭಾಗದ ಉಪನ್ಯಾಸ ಕರು, ವಿದ್ಯಾರ್ಥಿಗಳು ಭಾಗವಹಿಸಿ ದ್ದರು.