ಮಡಿಕೇರಿ, ನ. ೨೭: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡು ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾಟದ ಚಾಂಪಿಯನ್ ಆಗಿ ಆತಿಥೇಯ ಎಂ.ಬಾಡಗ (ಎ) ತಂಡ ಹೊರಹೊಮ್ಮಿತು. ಕಿರುಂದಾಡು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯ ಆರಂಭವಾದ ಬಳಿಕ ೨೩ನೇ ನಿಮಿಷಕ್ಕೆ ಎಂ.ಬಾಡಗ ತಂಡದ ರಮೇಶ್ ಪೆನಾಲ್ಟಿ ಕಾರ್ನರನ್ನು ಮಡಿಕೇರಿ, ನ. ೨೭: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡು ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾಟದ ಚಾಂಪಿಯನ್ ಆಗಿ ಆತಿಥೇಯ ಎಂ.ಬಾಡಗ (ಎ) ತಂಡ ಹೊರಹೊಮ್ಮಿತು. ಕಿರುಂದಾಡು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯ ಆರಂಭವಾದ ಬಳಿಕ ೨೩ನೇ ನಿಮಿಷಕ್ಕೆ ಎಂ.ಬಾಡಗ ತಂಡದ ರಮೇಶ್ ಪೆನಾಲ್ಟಿ ಕಾರ್ನರನ್ನು ಪೆನಾಲ್ಟಿ ಶೂಟೌಟ್ ಮೊರೆಹೋಗ ಲಾಯಿತು. ಇದರಲ್ಲಿ ೩-೧ ಗೋಲುಗಳ ಅಂತರದಲ್ಲಿ ಎಂ.ಬಾಡಗ ಗೆಲುವು ಸಾಧಿಸಿತು. ಬಾಡಗ ಪರ ಮಯೂರ್, ಬೋಪಣ್ಣ, ರಮೇಶ್, ಕಿರುಂದಾಡು ಪರ ಕವನ್ ಏಕೈಕ ಗೋಲು ದಾಖಲಿಸಿದರು.
ಬಿರುಬಿಸಿಲನ್ನು ಲೆಕ್ಕಿಸದೆ ಕ್ರೀಡಾಪಟುಗಳು ಗೆಲುವಿಗಾಗಿ ನಡೆಸಿದ ಪೈಪೋಟಿ ರೋಚಕವಾಗಿತ್ತು. ಚಾಂಪಿಯನ್ ತಂಡಕ್ಕೆ ರೂ.೭೫ ಸಾವಿರ ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ನಾಲ್ಕನೇ ಸ್ಥಾನ ಪಡೆದ ಚೆಂಬೆಬೆಳ್ಳೂರು ಹಾಗೂ ಮೂರನೇ ಸ್ಥಾನ ಪಡೆದ ನಾಪೋಕ್ಲು ತಂಡಕ್ಕೆ ತಲಾ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಗಮನಸೆಳೆದ ಯುವತಿ: ರಾಷ್ಟ್ರೀಯ ಬಾಲಕಿಯರ ಜೂನಿಯರ್ ತಂಡವನ್ನು ಪ್ರತಿನಿಧಿಸಿದ್ದ ಪಾಂಡAಡ ದೇಚಮ್ಮ ಆತಿಥೇಯ ಬಾಡಗ (ಎ) ತಂಡದಲ್ಲಿ ಆಡಿ ಗಮನ ಸೆಳೆದಳು. ತಾ. ೨೬ ರಂದು ನಡೆದ ಸೆಮಿಫೈನಲ್ ಪಂದ್ಯಾಟದಲ್ಲ್ಲಿ ಈಕೆ ೨ ಗೋಲು ಬಾರಿಸಿ ತಂಡ ಫೈನಲ್ ಪ್ರವೇಶಿಸಲು ಕಾರಣಳಾಗಿದ್ದಳು.
ತೀರ್ಪುಗಾರರಾಗಿ ಚಂದಪAಡ ಆಕಾಶ್,
(ಮೊದಲ ಪುಟದಿಂದ) ಅಂಜಪರವAಡ ಕುಶಾಲಪ್ಪ, ತಾಂತ್ರಿಕ ನಿರ್ದೇಶಕ ಪಳಂಗAಡ ಲವಕುಮಾರ್, ತಾಂತ್ರಿಕ ವಿಭಾಗದಲ್ಲಿ ಸುಳ್ಳಿಮಾಡ ಸುಬ್ಬಯ್ಯ, ಕುಪ್ಪಂಡ ದಿಲನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ, ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್, ಕಾರ್ಯನಿರ್ವಹಿಸಿದರು.
ಹಲವು ವರ್ಷಗಳ ಬಳಿಕ ಮೂರ್ನಾಡಿನಲ್ಲಿ ೬ ದಿನಗಳ ಕಾಲ ನಡೆದ ಹಾಕಿ ಪಂದ್ಯಾಟದ ಫೈನಲ್ಸ್ ನಲ್ಲಿ ಕ್ರೀಡಾಭಿಮಾನಿಗಳು ಸಂಭ್ರಮಿಸಿದರು.
ಯುವಪಡೆ ಬ್ಯಾಂಡ್ ಬಾರಿಸುತ್ತ, ಪಟಾಕಿ ಸಿಡಿಸಿ, ವಾಲಗಕ್ಕೆ ಹೆಜ್ಜೆಹಾಕುತ್ತ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದರು.
ಸಭಾ ಕಾರ್ಯಕ್ರಮ : ಪಂದ್ಯಾವಳಿಗೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕ್ರೀಡಾ ಭಾರತಿ ಕ್ಷೇತ್ರೀಯ ಪ್ರಮುಖ್ ಚಂದ್ರಶೇಖರ್ ಜಾಗೀರ್ ದಾರ್, ಕೊಡಗು ಮತ್ತು ಹಾಕಿಗೆ ಅವಿನಾಭಾವ ಸಂಬAಧವಿದೆ. ಕ್ರೀಡೆಗೆ ಭಾರತದಲ್ಲಿ ಪ್ರೋತ್ಸಾಹ ಹೆಚ್ಚಿದೆ. ಸರಕಾರ ಅನೇಕ ಯೋಜನೆಯನ್ನು ಕ್ರೀಡೆಗಾಗಿ ರೂಪಿಸಿದೆ. ಖೇಲೋ ಇಂಡಿಯಾ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಭಾರತೀಯ ಹಾಕಿ ಅತಂತ್ರದಲ್ಲಿದ್ದ ಸಂದರ್ಭ ಭಾರತ ತಂಡವನ್ನು ಓರಿಸ್ಸಾ ಸರಕಾರ ಬೆಂಬಲಿಸಿದ ಪರಿಣಾಮ ಇಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಕೊರೊನಾ ಪರಿಸ್ಥಿತಿಯಿಂದ ಕೊಡಗಿನಲ್ಲಿ ಕ್ರೀಡಾ ಹಾಗೂ ಸಾಂಸ್ಲೃತಿಕ ಚಟುವಟಿಕೆ ನಡೆಯದೆ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಕೊಡಗು ವಿಶ್ವಮನ್ನಣೆ ಗಳಿಸಿಕೊಳ್ಳಲು ಕ್ರೀಡೆಯೂ ಒಂದು ಕಾರಣವಾಗಿದೆ. ಹಾಕಿ ಕ್ರೀಡೆಗೆ ಜಿಲ್ಲೆಯಲ್ಲಿ ಪೂರಕ ವಾತಾವರಣವಿದೆ. ಕೊಡಗಿನ ೧೧ ಹಾಕಿ ಆಟಗಾರರು ಒಲಂಪಿಕ್ ಅನ್ನು ಪ್ರತಿನಿಧಿಸಿದ್ದಾರೆ. ಇದರೊಂದಿಗೆ ರಾಷ್ಟ್ರ, ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈದು ಜಿಲ್ಲೆಗೆ ಹೆಗ್ಗಳಿಕೆ ತಂದಿದ್ದಾರೆ. ಕ್ರೀಡಾಪಟುಗಳಿಗೆ ಮೀಸಲಿಟ್ಟಿರುವ ಸರಕಾರಿ ಹುದ್ದೆಯನ್ನು ಹೆಚ್ಚಿಸುವಂತಾಗಬೇಕು ಎಂದರು.
ಸಮಾಜ ಸೇವಕ ಡಾ.ಮಂಥರ್ ಗೌಡ ಮಾತನಾಡಿ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು. ಇಂತಹ ಪಂದ್ಯಾವಳಿಯನ್ನು ಬೆಂಬಲಿಸಿದರೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆತಂತಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಮುತ್ತಾರ್ಮುಡಿಯ ಹಿರಿಯ ಸ್ವಯಂ ಸೇವಕ ಶ್ಯಾಂಪ್ರಸಾದ್ ಮಾತನಾಡಿ, ಹಿಂದೂ ಸಮಾಜ ಜಾತಿ ವ್ಯವಸ್ಥೆಯಲ್ಲಿ ನಿಂತಿಲ್ಲ. ಸಾಮೂಹಿಕ ಚಿಂತನೆಯ ಬುನಾದಿಯಲ್ಲಿ ನಿಂತಿದೆ. ಕ್ರೀಡೆಯ ಮೂಲಕ ಎಲ್ಲರೂ ಒಗ್ಗೂಡಲು ಅವಕಾಶವಿದೆ ಎಂದರು. ಕ್ಲಬ್ ಅಧ್ಯಕ್ಷ ಕಂಬೀರAಡ ಸತೀಶ್ ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಎಂ. ಬಾಡಗ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕೋಟೇರ ಪ್ರತಾಪ್, ದಾನಿಗಳಾದ ಬಾಚೆಟ್ಟೀರ ಕಮಲ ಮುದ್ದಯ್ಯ, ಬಾರಿಯಂಡ ಜಯಂತಿ, ಮಡೆಯಂಡ ಉಮ್ಮಯ್ಯ, ಮುಕ್ಕಾಟೀರ ಸುರೇಶ್ ಪೆಮ್ಮಯ್ಯ ಹಾಜರಿದ್ದರು. ಅಪ್ಪಚ್ಚಂಡ ಪೃಥ್ವಿ ಪ್ರಾರ್ಥಿಸಿ, ಮುಕ್ಕಾಟೀರ ಕ್ಯಾರಿ ಕರುಂಬಯ್ಯ ಸ್ವಾಗತಿಸಿ, ವಂದಿಸಿದರು.