ಸುಂಟಿಕೊಪ್ಪ, ನ. ೨೭ : ಸರಕಾರ ಹಾಗೂ ಜಿಲ್ಲಾಡಳಿತ ಸಹಯೋಗ ದೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಸಾರ್ವಜನಿಕರಿಗೆ ನಡೆಸಲಾಯಿತು. ಸುಂಟಿಕೊಪ್ಪ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಕಾರ ಜಿಲ್ಲಾಡಳಿತದ ಆದೇಶದ ಮೇರೆಗೆ ದೇಸೀಯ ಕ್ರೀಡಾ ಕೂಟ ಉತ್ತೇಜಿಸುವ ನಿಟ್ಟಿನಲ್ಲಿ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಯನ್ನು ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಮತ್ತು ಗೌಡ ಸಂಘ ಸುಂಟಿಕೊಪ್ಪ ನಾಡು. ಅಧ್ಯಕ್ಷರಾದ ಯಂಕನ ಉಲ್ಲಾಸ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸದಸ್ಯರಾದ ಆರ್.ಎಸ್. ವಸಂತಿ, ಎಂ.ನಾಗರತ್ನ ಸುರೇಶ್, ಎಂ. ಮಂಜುನಾಥ್, ಸೋಮನಾಥ್, ಹೆಚ್.ಯು. ರಫೀಕ್ ಖಾನ್, ಶಬೀರ್, ಕೆ.ಎಂ. ಆಲಿಕುಟ್ಟಿ. ಹಾಜರಿದ್ದರು.