ಮಡಿಕೇರಿ, ನ. ೨೭: ಭಾವಚಿತ್ರ ವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದ್ದು, ೧೮ ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ೨೫೦ ಹಾಡಿ ಗಳಲ್ಲೂ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದೆ ಎಂದು ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ೯೬, ಮಡಿಕೇರಿ ತಾಲೂಕಿನಲ್ಲಿ ೬೬ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ೮೮ ಹಾಡಿಗಳಿದ್ದು, ಸುಮಾರು ೫೮,೦೫೪ ಜನರಿದ್ದಾರೆ. ಆ ನಿಟ್ಟಿನಲ್ಲಿ ಹಾಡಿಗಳಲ್ಲಿ ವಾಸಿಸುವ ಮೂಲ ನಿವಾಸಿ ಜೇನುಕುರುಬ, ಯರವ, ಸೇರಿದಂತೆ ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ ೧೮ ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ ಭಾವಚಿತ್ರ ಒಳಗೊಂಡ ಮತದಾರರ ಗುರುತಿನ ಮಡಿಕೇರಿ, ನ. ೨೭: ಭಾವಚಿತ್ರ ವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದ್ದು, ೧೮ ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ೨೫೦ ಹಾಡಿ ಗಳಲ್ಲೂ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದೆ ಎಂದು ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ೯೬, ಮಡಿಕೇರಿ ತಾಲೂಕಿನಲ್ಲಿ ೬೬ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ೮೮ ಹಾಡಿಗಳಿದ್ದು, ಸುಮಾರು ೫೮,೦೫೪ ಜನರಿದ್ದಾರೆ. ಆ ನಿಟ್ಟಿನಲ್ಲಿ ಹಾಡಿಗಳಲ್ಲಿ ವಾಸಿಸುವ ಮೂಲ ನಿವಾಸಿ ಜೇನುಕುರುಬ, ಯರವ, ಸೇರಿದಂತೆ ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ ೧೮ ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿ ಭಾವಚಿತ್ರ ಒಳಗೊಂಡ ಮತದಾರರ ಗುರುತಿನ ಹಾಡಿ, ಮಜ್ಜಿಗೆಹಳ್ಳ ಫಾರಂ, ಮಜ್ಜಿಗೆಹಳ್ಳ ಆನೆ ಕ್ಯಾಂಪ್, ಬೊಮ್ಮಾಡು, ದೇವರಕಾಡು ಪೈಸಾರಿ, ಕೊಳಂಗೆರೆ, ಚೊಟ್ಟೆಪಾರೆ, ದಿಡ್ಡಳ್ಳಿ, ನೆಹರು ಕಾಲೋನಿ, ಅಂಬುಕೋಟೆ, ಬೊಂಬುಕಾಡು, ಅರ್ವತೋಕ್ಲು, ಕಾರೆಕಾಡು, ಹಾಲುಗುಂದ, ಪಿಎಚ್‌ಎಸ್. ಕಾಲೋನಿ, ದೇವ ಕಾಲೋನಿ, ತಿರುನಾಡು ಪೈಸಾರಿ, ಸೀತಾ ಕಾಲೋನಿ, ಮಡಿಕೇರಿ ತಾಲೂಕಿನ ಜೋಡುಪಾಲ ಹಾಗೂ ಸೋಮವಾರಪೇಟೆ ತಾಲೂಕಿನ ಹೇರೂರು, ಯಡವನಾಡು, ಬಾಳೆಗುಂಡಿ, ಕಡ್ಲೆಮಕ್ಕಿ, ಯಲಕನೂರು, ಮತ್ತಿಕಾಡು ಎಸ್ಟೇಟ್, ಭೂತನ ಕಾಡು ಎಸ್ಟೇಟ್‌ಗಳಲ್ಲಿ ಈಗಾಗಲೇ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿ.ಪಂ. ಸಿಇಓ ಡಾ.ಎಸ್. ಆಕಾಶ್ ಅವರು ಮಾತನಾಡಿ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಹರಿಗೆ ಅವಕಾಶ ಮಾಡಿದೆ. ಆ ನಿಟ್ಟಿನಲ್ಲಿ ೧೮ ವರ್ಷ ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದರು.

ಬೂತ್ ಮಟ್ಟದ ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿದಾಗ ಸರಿಯಾದ ಮಾಹಿತಿ ನೀಡಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬೇಕು. ಈಗಾಗಲೇ ಮತದಾರರ ಪಟ್ಟಿಯಲ್ಲಿ ನೋಂದಣಿ ಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳ ಬೇಕು. ನೋಂದಣಿಯಾಗದೆ ಇದ್ದಲ್ಲಿ ನಮೂನೆ ೬ ರಲ್ಲಿ ಅರ್ಜಿಯನ್ನು ಸ್ಥಳ ದಲ್ಲಿಯೇ ನೀಡಬಹುದಾಗಿದೆ. ಎಂದು ಜಿ.ಪಂ.ಸಿಇಒ ಅವರು ಕೋರಿದರು.

ಡಿಸೆಂಬರ್ ೮ ರವರೆಗೆ ಆಯಾಯ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಮತ್ತು ಸಂಬAಧಪಟ್ಟ ತಾಲೂಕು ಕಚೇರಿ ಗಳಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಮತದಾರರೇ hಣಣಠಿs://ತಿತಿತಿ. ಟಿvsಠಿ.iಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮತ್ತು hಣಣಠಿs://voಣeಡಿಠಿoಡಿಣಚಿಟ.eಛಿi.gov.iಟಿ ಮತ್ತು ವಿಎಚ್‌ಎ ಮೊಬೈಲ್ ಆ್ಯಪ್ ಮೂಲಕ ನಮೂನೆ ೬ಎ, ನಮೂನೆ ೭ ಮತ್ತು ನಮೂನೆ ೮ ನ್ನು ಸಲ್ಲಿಸ ಬಹುದಾಗಿದೆ ಎಂದು ತಿಳಿಸಿದರು.

ಅಭಿಯಾನ ಸಂದರ್ಭದಲ್ಲಿ ಮನೆ ಮನೆಗೆ ಬಿಎಲ್‌ಓಗಳು ಭೇಟಿ ನೀಡಿದಾಗ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಸ್ಥಳಾಂತರ, ತೆಗೆಯುವುದು ಮತ್ತಿತರ ಕಾರ್ಯಕ್ಕೆ ಸಹಕರಿಸುವಂತೆ ಜಿ.ಪಂ. ಸಿಇಓ ಅವರು ಕೋರಿದರು.

ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ದಲ್ಲಿ ಒಟ್ಟು ೪,೩೯,೦೩೯ ಮತದಾರ ರಿದ್ದು, ೨,೧೭,೩೪೯ ಪುರುಷ ಮತ್ತು ೨,೨೧,೬೭೧ ಮಹಿಳಾ ಮತದಾರರು, ಹಾಗೆಯೇ ೧೯ ಇತರೆ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ದಲ್ಲಿ ಒಟ್ಟು ೨,೨೩,೪೧೨ ಮತದಾರರು ಇದ್ದು, ೧,೦೯,೯೫೨ ಪುರುಷ ಮತ್ತು ೧,೧೩,೪೫೨ ಮಹಿಳಾ ಮತದಾರರು ಹಾಗೆಯೇ ೮ ಇತರೆ ಮತದಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨,೧೫,೬೨೭ ಮತದಾರರು ಇದ್ದು, ೧,೦೭,೩೯೭ ಪುರುಷ ಮತ್ತು ೧,೦೮,೨೧೯ ಮಹಿಳಾ ಮತದಾರರು, ಹಾಗೆಯೇ ೧೧ ಇತರೆ ಮತದಾರರು ಇದ್ದಾರೆ.