ಮಡಿಕೇರಿ, ನ. ೨೮ : ಚೊಚ್ಚಲ ಬಾರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೊಡವ ಪ್ರೀಮಿಯರ್ ಕ್ರಿಕೆಟ್ ಲೀಗ್ ನ ಚಾಂಪಿಯನ್ ಆಗಿ ‘ಮೈಸೂರು ಮಕ್ಕ' ತಂಡ ಹೊರಹೊಮ್ಮಿತು. ಟೀಂ ಕೈಮಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಆ್ಯಂಡ್ ಜಿ ಕ್ರಿಯೇಷನ್ ನಾಲ್‌ನಾಡ್ ನರಿಯ ತಂಡ ಪಡೆದುಕೊಂಡಿತು.
ಮಡಿಕೇರಿ, ನ. ೨೮ : ಚೊಚ್ಚಲ ಬಾರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೊಡವ ಪ್ರೀಮಿಯರ್ ಕ್ರಿಕೆಟ್ ಲೀಗ್ ನ ಚಾಂಪಿಯನ್ ಆಗಿ ‘ಮೈಸೂರು ಮಕ್ಕ' ತಂಡ ಹೊರಹೊಮ್ಮಿತು. ಟೀಂ ಕೈಮಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಆ್ಯಂಡ್ ಜಿ ಕ್ರಿಯೇಷನ್ ನಾಲ್‌ನಾಡ್ ನರಿಯ ತಂಡ ಪಡೆದುಕೊಂಡಿತು.
ನೀಡಿತು. ಗುರಿ ಬೆನ್ನತ್ತಿದ್ದ ಮೈಸೂರು ಮಕ್ಕ ೨.೨ ಓವರ್‌ಗಳಲ್ಲಿಯೇ ಯಾವುದೇ ವಿಕೆಟ್ ಕಳೆದುಕೊಳ್ಳದೆ ನೀಡಿದ್ದ ಗುರಿಯನ್ನು ಪೂರ್ಣಗೊಳಿಸಿ ವಿಜಯ ಸಾಧಿಸಿತು.
ತೀರ್ಪುಗಾರರಾಗಿ ರವಿ, ಯಶ್ವಂತ್ ಧನುಷ್, ರಘು, ಹರ್ಷವರ್ಧನ್, ರಾಹುಲ್, ವೀಕ್ಷಕ ವಿವರಣೆಗಾರರಾಗಿ ಚಂಡೀರ ರಚನ್, ಕೊಟ್ಟಂಗಡ ಅಪ್ಪಣ್ಣ, ಪೋರ್ಕಂಡ ಸುನಿಲ್ ಕಾರ್ಯನಿರ್ವಹಿಸಿದರು. ಇದೇ ಮೊದಲ ಬಾರಿಗೆ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಲೀಗ್ ಜನಮನ ರಂಜಿಸಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೀಡಾಪ್ರೇಮಿಗಳು ಚಪ್ಪಾಳೆ, ಶಿಳ್ಳೆ, ಬ್ಯಾಂಡ್ ಬಾರಿಸಿ ತಂಡಗಳನ್ನು ಪ್ರೋತ್ಸಾಹಿಸಿದರು. ವಾಲಗ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು.
ಇದೇ ಸಂದರ್ಭ 'ಲೇಲುಳ್ಳಿ ಲೇ ಲೇ' ಅಲ್ಬಂ ಹಾಡನ್ನು ಬಿಡುಗಡೆ ಗೊಳಿಸಲಾಯಿತು. ಇದರೊಂದಿಗೆ ‘ತಿಂಗಕೊರ್ ಮೊಟ್ಟ್ ತಲಕಾವೇರಿಕ್' ಕಲಾತಂಡದಿAದ ಉಮ್ಮತಾಟ್, ಕೋಲಾಟ್, ಪರೆಯಕಳಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ಸಿಡಿಮದ್ದು ಸಿಡಿಸುವುದರೊಂದಿಗೆ ವಾಲಗಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರು ಸಂಭ್ರಮಿಸಿದರು.
ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,
(ಮೊದಲ ಪುಟದಿಂದ) ಕೊಡವರ ಪ್ರತಿಮನೆಯಲ್ಲಿ ಕ್ರೀಡಾಪಟುಗಳು ಇದ್ದೆ ಇರುತ್ತಾರೆ. ಇದರೊಂದಿಗೆ (ಮೊದಲ ಪುಟದಿಂದ) ಕೊಡವರ ಪ್ರತಿಮನೆಯಲ್ಲಿ ಕ್ರೀಡಾಪಟುಗಳು ಇದ್ದೆ ಇರುತ್ತಾರೆ. ಇದರೊಂದಿಗೆ ಜನಾಂಗ ಒಂದಾಗಲು ವೇದಿಕೆ ಸೃಷ್ಟಿಯಾಗುತ್ತದೆ ಎಂದರು.
ಸಮಾಜ ಸೇವಕ ಡಾ.ಮಂಥರ್ ಗೌಡ ಭಾಗವಹಿಸಿ ಮಾತನಾಡಿ, ಕ್ರೀಡೆಯಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ರೆನ್ ಜಿಟ್ ಟೆಕ್ನೋಲಾಜಿಸ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಂದೀರ ಬಿ. ತಿಮ್ಮಯ್ಯ, ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.