ಮಡಿಕೇರಿ, ನ. ೨೭: ಅಂತರ ರಾಷ್ಟಿçÃಯ ಲಿಂಗಾಯತ ಯೂತ್ ವೇದಿಕೆಯು (ಐಎಲ್‌ವೈಎಫ್) ೨೦೨೩ರ ಜನವರಿ ೨೦ರಿಂದ ೨೨ರವರೆಗೆ ಬೆಂಗಳೂರಿನಲ್ಲಿ ಮೂರು ದಿನಗಳ ವೀರಶೈವ ಲಿಂಗಾಯತ ಜಾಗತಿಕ ವ್ಯವಹಾರ ಶೃಂಗಸಭೆ ಹಮ್ಮಿಕೊಂಡಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ಅವಿನಾಶ್ ಪಾಳೇಗಾರ್, ವೀರಶೈವ ಲಿಂಗಾಯತರ ವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಒಟ್ಟುಗೂಡಿಸುವ ಉದ್ದೇಶದಿಂದ ೨೦೧೩ರಲ್ಲಿ ಈ ಸಂಸ್ಥೆ ಆರಂಭವಾಗಿತ್ತು. ಸಂಸ್ಥೆಗೆ ಈಗ ೧೦ ವರ್ಷ ತುಂಬಿದೆ. ದಶಮಾನೋತ್ಸವದ ಅಂಗವಾಗಿ ಸಮಾಜದ ಉದ್ದಿಮೆದಾರರ ಶೃಂಗಸಭೆ ಆಯೋಜಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಜನವರಿ ೨೦ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದರು.

ಮೂರು ದಿನ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರ, ತಯಾರಿಕಾ ಕ್ಷೇತ್ರ, ನವೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ವಲಯಗಳು ಇರಲಿವೆ. ಉದ್ಯೋಗ ಮೇಳ, ಉದ್ದಿಮೆಗೆ ಸಂಬAಧಿಸಿದAತೆ ಉಪನ್ಯಾಸ, ಕಾರ್ಯಾಗಾರ ಗಳು ನಡೆಯಲಿವೆ. ಶೃಂಗಸಭೆಯಲ್ಲಿ ಭಾಗವಹಿಸುವಿಕೆ ಸಂಪೂರ್ಣ ಉಚಿತ. ಎಲ್ಲ ವರ್ಗ ಜಾತಿಯ ಯುವಕ ಯುವತಿಯರು ಸಮಾವೇಶದಲ್ಲಿ ಭಾಗವಹಿಸಬಹುದು. ಶೃಂಗಸಭೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಮಾಹಿತಿ ಒದಗಿಸಿದರು.

ಜಗತ್ತಿನಾದ್ಯಂತ ಇರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು ಒಂದೇ ಸೂರಿನಡಿ ತರುವುದು ಮತ್ತು ಕರ್ನಾಟಕದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸುವುದು. ಕರ್ನಾಟಕ ಸರ್ಕಾರವು ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ವ್ಯಾಪಾರ, ರೈತ ಸಮುದಾಯವನ್ನು ಉತ್ತೇಜಿಸುವುದು. ಜಿಲ್ಲಾ ಮಟ್ಟದಲ್ಲಿ ನವೋದ್ಯಮ ಘಟಕವನ್ನು ಬಲಪಡಿಸುವುದು ಮತ್ತು ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು. ಕರ್ನಾಟಕದಾದ್ಯಂತ ರೈತ ಸಮುದಾಯವನ್ನು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳನ್ನು ಅನ್ವೇಷಿಸುವುದು ಈ ಶೃಂಗಸಭೆಯ ಉದ್ದೇಶ ಎಂದು ಅವಿನಾಶ್ ಪಾಳೇಗಾರ್ ವಿವರಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಸಿದ್ದರಾಮ್ ಜತ್ತಿ, ಸಹ ಸಂಚಾಲಕ ಬಿಎಸ್. ಪ್ರಶಾಂತ್, ಮೈಸೂರು ವಿಭಾಗದ ಅಧ್ಯಕ್ಷ ವೀರೇಶ್, ಟ್ರಸ್ಟಿ ಪ್ರದೀಪ್ ಶಿವಶಂಕರ್, ಸದಸ್ಯ ಕುಮಾರ್ ಹಾಜರಿದ್ದರು. ಸುಧಾರಣೆ ಮಾಡಲಾಗಿದೆ. ಉಚಿತವಾಗಿ ನೀರನ್ನು ಪೂರೈಸುವುದರ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಪಂಜಾಬ್‌ನಲ್ಲಿಯೂ ಉತ್ತಮ ಆಡಳಿತ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಮುಂದಿನ ವಿಧಾನಸಭಾ ಚುನಾವಣೆಗೆ ಕೊಡಗಿನ ೨ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವುದು ಖಚಿತ. ದೇಶಕ್ಕೆ ಹಾಗು ರಾಜ್ಯಕ್ಕೆ ಪರ್ಯಾಯ ಪಕ್ಷದ ಅನಿವಾರ್ಯತೆ ಇದೆ. ಈ ಸ್ಥಾನವನ್ನು ನಮ್ಮ ಪಕ್ಷ ತುಂಬಲಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಕೆ. ಅಪ್ಪಯ್ಯ, ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ಪೃಥ್ವಿ, ಭಾಗಮಂಡಲ ಅಧ್ಯಕ್ಷ ಸಿ.ಎಂ. ರವಿ, ತಾವೂರು ಗ್ರಾಮ ಸಮಿತಿ ಅಧ್ಯಕ್ಷ ಕೆ.ಎಂ. ರವಿ ಹಾಜರಿದ್ದರು.