ಮಡಿಕೇರಿ, ನ. ೨೭: ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ೩೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಂಜನೇಯ ದೇವಾಲಯದಲ್ಲಿ ಅಖಂಡ ಏಕಾಹ ಭಜನೆ ಕಾರ್ಯಕ್ರಮ ನಡೆಯಿತು. ಭಜನೆಯಲ್ಲಿ ಮಡಿಕೇರಿಯ ಶ್ರೀ ಬಾಲರಾಮಾಂಜನೇಯ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ, ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ, ಶ್ರೀ ಶೃತಿಲಯ ಭಜನಾ ಮಂಡಳಿ, ಅಶೋಕಪುರದ ವೆಂಕಟೇಶ್ವರ ಕಲಾತಂಡ, ೨ನೇ ಮೊಣ್ಣಂಗೇರಿಯ ಶ್ರೀ ರಾಮ ಭಜನಾ ಸೇವಾ ಸಮಿತಿ, ಮೋದೂರಿನ ಮೇಘಾ ಭಟ್ ತಂಡ, ಭೂತನ ಕಾಡಿನ ಶ್ರೀ ಓಂಶಕ್ತಿ ಭಜನಾ ಮಂಡಳಿ, ಮಡಿಕೇರಿ ಇಸ್ಕಾನ್ ತಂಡ, ಶ್ರೀ ರಾಮಾಂಜನೇಯ ಭಜನಾ ಮಂಡಳಿ, ತೊಂಬತ್ತುಮನೆಯ ಶ್ರೀ ವಿನಾಯಕ ಸೇವಾ ಸಮಿತಿ ತಂಡಗಳು ಪಾಲ್ಗೊಂಡಿದ್ದವು.

ಕಾರ್ಯಕ್ರಮದಲ್ಲಿ ಭದ್ರದೀಪ ಜ್ವಲನವನ್ನು ಮುಂಜಾAದಿರ ಲಲಿತಾ ತಿಮ್ಮಯ್ಯ ನೇರವೇರಿಸಿದರು. ಸಮಾರೋಪ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಹಿತವಚನ ನೀಡಿದರು. ರಾಮಾಂಜನೇಯ ಭಜನಾ ಮಂಡಳಿಯ ಮಹೇಶ್, ಪ್ರಮುಖರಾದ ಡಾ. ಪಾಟ್ಕರ್ ಮತ್ತಿತರರು ಹಾಜರಿದ್ದರು.