ನ. ೨೭: ಬೆಂಗಳೂರು ಕೊಡವ ಸಮಾಜದ ವುಮೆನ್ಸ್ ಕೌನ್ಸಿಲ್ ವತಿಯಿಂದ ಇಂದು ಬೆಂಗಳೂರಿನಲ್ಲಿ ಕೊಡವ ಸೀರೆಯೊಂದಿಗೆ ಬಾರಿ ನಡ್ಕನ - ವಾಕಥಾನ್ ಏರ್ಪಡಿಸಲಾಗಿತ್ತು. ಕೊಡವ ಸಮಾಜದ ಮೆಡಿಕಲ್ ವೆಲ್‌ಫೇರ್ ಫಂಡ್‌ಗೆ ನಿಧಿ ಸಂಗ್ರಹಿಸಿ ನೀಡುವ ಉದ್ದೇಶದಿಂದ ಮಹಿಳಾ ಕೌನ್ಸಿಲ್‌ನ ಸದಸ್ಯೆಯರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕೊಡವ ಸಮಾಜದ ಆವರಣದಿಂದ ವಿಧಾನಸೌಧ ವಿಕಾಸಸೌಧದ ಮೂಲಕ ಮತ್ತೆ ಸಮಾಜದ ತನಕ ನಡೆದ ಬಾರಿ ನಡ್ಕನ - ವಾಕಥಾನ್‌ನಲ್ಲಿ ನೂರಾರು ಮಹಿಳೆಯರು ಕೊಡವ ಧಿರಿಸಿನೊಂದಿಗೆ ಭಾಗವಹಿಸಿದ್ದರು. ಬಾರಿ ನಡ್ಕನ - ವಾಕಥಾನ್‌ಗೆ ಬೆಂಗಳೂರು ಕೇಂದ್ರ ವಿಭಾಗದ ಎಸಿಪಿ ಅಂಜಪರವAಡ ಕವಿತಾ ಕಾರ್ಯಪ್ಪ ಅವರು ಚಾಲನೆ ನೀಡಿದರು.

ವುಮೆನ್ಸ್ ಕೌನ್ಸಿಲ್‌ನ ಅಧ್ಯಕ್ಷೆ ತೀತಿರ ಶರ್ಮಿಲಿ ಅಪ್ಪಚ್ಚು, ಉಪಾಧ್ಯಕ್ಷೆ ಕುಳಿಯಕಂಡ ದಿವ್ಯಾ, ಕಾರ್ಯದರ್ಶಿ ಕೈಬುಲಿರ ವಾಣಿ, ಜಂಟಿ ಕಾರ್ಯದರ್ಶಿ ಮುಂಡುಮಾಡ ಭವ್ಯ, ಖಜಾಂಚಿ ಕಾಂಡAಡ ಚಂಪಾ ಸೇರಿದಂತೆ ಸದಸ್ಯೆಯರು ಪಾಲ್ಗೊಂಡಿದ್ದರು.