ಮಡಿಕೇರಿ, ನ. ೨೬: ಮಾಯಮುಡಿ ಶ್ರೀ ರಾಮ ಭಜನಾ ಮಂದಿರದ ಗರ್ಭಗುಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ದಿನೇಶ್ ಗೌಡ ಹಾಗೂ ಗೋಣಿಕೊಪ್ಪಲು ವಲಯ ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿ ಪುಷ್ಪ, ಮಾಯಮುಡಿ ಒಕ್ಕೂಟದ ಅಧ್ಯಕ್ಷರಾದ ಪಿ.ಸಿ. ಪ್ರೇಮ ಅವರುಗಳು ಗರ್ಭಗುಡಿಯ ಜೀರ್ಣೋದ್ಧಾರಕ್ಕೆ ರೂ.೧.೫೦ ಲಕ್ಷದ ಚೆಕ್ ನ್ನು ಭಜನಾ ಮಂದಿರದ ಅಧ್ಯಕ್ಷ ಜೆ.ಎಸ್. ಲೋಕೇಶ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ, ಹೆಚ್.ಆರ್. ಸುಶೀಲ, ಸಿ.ಕೆ. ಪೂವಯ್ಯ, ಊರಿನ ಹಿರಿಯರಾದ ಮರಿಸ್ವಾಮಿ, ಎ.ಎ. ಬೋಪಣ್ಣ, ಮನೋಹರ್, ದೇವಾನಂದ್, ಸುದೀರ್, ಎನ್. ಪ್ರವೀಣ್, ಗಂಗಾ ಆಚಾರಿ, ಎಸ್.ಬಿ. ರಮೇಶ್, ಎ.ಸಿ. ಪ್ರದೀಪ್ ಹಾಜರಿದ್ದರು.