ಕೂಡಿಗೆ, ನ. ೨೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಹೊಸಹಳ್ಳ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಕಾರ್ತಿಕ ಮಾಸದ ವಿಶೇಷ ಪೂಜಾ ದೀಪೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಜರುಗಿತು. ಶನೇಶ್ವರ ದೇವರಿಗೆ ವಿಶೇಷ ಪೂಜೆ ಹೋಮ ಹವನಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಆವರಣದಲ್ಲಿ ನಡೆದವು. ಕಾರ್ತಿಕ ಮಾಸದ ವಿಶೇಷ ದೀಪೋತ್ಸವಕ್ಕೆ ಹೆಬ್ಬಾಲೆ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ತುಂಗರಾಜ್ ಚಾಲನೆ ನೀಡಿದರು. ಈ ಸಂದರ್ಭ ತೊರೆನೂರು ಗ್ರಾ.ಪಂ. ಅಧ್ಯಕ್ಷೆ ರೂಪ ಮಹೇಶ್, ಪ್ರಮುಖರಾದ ವಿ.ಟಿ. ದೇವರಾಜ್, ಸುರೇಶ್, ಚಂದ್ರಶೇಖರ್, ಪ್ರಕಾಶ್ ರಮೇಶ್, ದೇವಾಲಯ ಸಮಿತಿಯ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಸಮಿತಿಯ ಸದಸ್ಯರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಆಗಮಿಸಿ, ಮಹಾಮಂಗಳಾರತಿ ಸ್ವೀಕರಿಸಿ, ನಂತರ ಅನ್ನಸಂತರ್ಪಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.