ಕೂಡಿಗೆ, ನ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಲಾಪುರ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಮೊದಲ ಜರ್ಸಿತಳಿ ಸಂರ್ವಧನಾ ಕೇಂದ್ರದ ಸಮುದಾಯ ಭವನದ ಕಟ್ಟಡವು ಇದೀಗ ತೀರ ಹಾಳಾಗಿರುವ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತೆರಳಿ ಪರಿಶೀಲನೆ ನಡೆಸಿದರು.

ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಸಮುದಾಯ ಭವನದ ಕಟ್ಟಡ ಗೋಡೆಗಳು ಉತ್ತಮವಾಗಿದ್ದು, ಅದರ ಮೇಲ್ಚಾವಣಿಯನ್ನು ಹಾಕುವ ಮೂಲಕ ಎಲ್ಲಾ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕ್ರಿಯಾ ಯೋಜನೆ ತಯಾರಿಸಿ ಅದರ ಮೂಲಕ ಸರಿಪಡಿಸುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಗಿರೀಶ್, ಕೂಡಾ ಅಧ್ಯಕ್ಷ ಚರಣ್, ನಿರ್ದೇಶಕ ವೈಶಾಕ್, ಹಾಡಿ ಮುಖ್ಯಸ್ಥ ಮುತ್ತಾ, ಕಿರಣ, ಕುಮಾರ್ ಕೂಡಿಗೆ ಸಹಕಾರ ಸಂಘ ಮಾಜಿ ನಿರ್ದೇಶಕ ಮಂಜಯ್ಯ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಡಿ.ಆರ್. ಪ್ರಭಾಕರ್, ಶಾಸಕರ ಆಪ್ತ ಕಾರ್ಯದರ್ಶಿ ರವಿ ಹಾಜರಿದ್ದರು.