ಮಡಿಕೇರಿ, ನ.೨೫ : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ಸಂಪ್ರದಾಯದAತೆ ಸಂಪ್ರೋಕ್ಷಣೆ ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವೂ ತಾ. ೨೭ ರಿಂದ ತಾ ೩೦ ರವರೆಗೆ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಲಿದೆ.
ತಾ. ೨೭ ರಂದು ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ ೭.೩೦ ಕ್ಕೆ ಗಣಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ. ತಾ. ೨೮ ರಂದು ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆ ೭.೩೦ ಕ್ಕೆ ಗಣಪತಿ ಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಭೂತ ಬಲಿ, ಶ್ರೀ ಭಗಂಡೇಶ್ವರ ದೇವರ ಉತ್ಸವ ತಾ. ೨೯ ರಂದು ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳಗ್ಗೆ ೭.೩೦ ಕ್ಕೆ ಗಣಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಭೂತ ಬಲಿ, ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಲಿದೆ.
ನವೆಂಬರ್, ೩೦ ರಂದು ಶ್ರೀ ಮಹಾವಿಷ್ಣು ದೇವರಿಗೆ ಬೆಳಗ್ಗೆ ೭.೩೦ ಕ್ಕೆ ಗಣಹೋಮ ಶ್ರೀ ಮಹಾವಿಷ್ಣು ಮತ್ತು ಪರಿವಾರ ದೇವರುಗಳ ಶುದ್ಧಿ ಕಲಶ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಭೂತ ಬಲಿ, ಶ್ರೀ ಮಹಾವಿಷ್ಣು ದೇವರ ಉತ್ಸವ ನಡೆಯಲಿದೆ.
ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ ಕೋರಿದ್ದಾರೆ.