ಗೋಣಿಕೊಪ್ಪ ವರದಿ, ನ. ೨೫ : ಮಾಯಮುಡಿ ಗ್ರಾಮದ ಕಂಗಳತ್ತ್ನಾಡ್ ಕೋಲ್ ಮಂದ್‌ನಲ್ಲಿ ಡಿಸೆಂಬರ್ ೧೦ ರಂದು ಪುತ್ತರಿ ಮಂದ್ ನಮ್ಮೆ ಆಚರಿಸುವ ನಿರ್ಧಾರವನ್ನು ಗುರುವಾರ ಕಂಗಳತ್‌ನಾಡ್ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಕಂಗಳತ್ತ್ನಾಡ್ ಮಹಿಳಾ ಸಮಾಜ ಸಹಯೋಗದಲ್ಲಿ ಬೆಳಗ್ಗೆ ಪುರುಷರು ಮತ್ತು ಮಹಿಳೆಯರಿಗೆ ಕ್ರೀಡಾಕೂಟ, ೨ ಗಂಟೆಗೆ ಮಾಯಮುಡಿ, ಬಾಳಾಜಿ, ರುದ್ರಬೀಡ್ ಕೇರಿಯ ಮಂದ್ ಪತ್ತುವೊ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಊರೋರ್ಮೆ ಆಯೋಜನೆ, ೭ ಸಾಧಕರಿಗೆ ಸನ್ಮಾನದ ಮೂಲಕ ಗೌರವಿಸಲು ನಿರ್ಧರಿಸಲಾಯಿತು. ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಪರೆಯಕಳಿ ಪ್ರದರ್ಶನ ನಡೆಯುವುದು.
ಪ್ರಮುಖರಾದ ಸಣ್ಣುವಂಡ ಬಿ. ರಮೇಶ್, ಚೆಪ್ಪುಡೀರ ರಾಧಾ ಅಚ್ಚಯ್ಯ, ಬಲ್ಯಂಡ ಯಮುನಾ, ಆಪಟ್ಟೀರ ವಿಮಲ, ಕೊಣಿಯಂಡ ರೋಹಿಣಿ, ಸಣ್ಣುವಂಡ ಡಯಾನ, ನಂದುನು, ಕವಿತಾ, ಪುಚ್ಚಿಮಾಡ ಸಪ್ನ, ಸಣ್ಣುವಂಡ ವಿನಯ್, ಆಪಟ್ಟೀರ ಪ್ರದೀಪ್, ಚೆಪ್ಪುಡೀರ ಪ್ರದೀಪ್ ಪೂವಯ್ಯ, ಬೆಳ್ಯಪ್ಪ ಇದ್ದರು.