ಕೂಡಿಗೆ, ನ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಮೂಲೆ ಗುಂಪಾಗಿರುವ ಮೇಕೆ ಹಾಲು ಸಂಸ್ಕರಣಾ ಘಟಕದ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬ್ಯಾಡಗೊಟ್ಟ ಗ್ರಾಮದ ಮೇಕೆ ಹಾಲು ಉತ್ಪಾದಕ ಘಟಕದ ಕೇಂದ್ರದಲ್ಲಿ ಕಾಯ್ದಿರಿಸಿದ ೧೧೨ ಎಕರೆಗಳಷ್ಟು ಪ್ರದೇಶದಲ್ಲಿ ಬೇಲಿಯನ್ನು ನಿರ್ಮಾಣ ಮಾಡಲಾಗಿದೆ. ನಂತರ ಒಂದು ಕೋಟಿ ರೂ. ವೆಚ್ಚದಲ್ಲಿ ಕಟ್ಟಡದ ಕಾಮಗಾರಿಯು ನಡೆದಿದೆ. ಆದರೆ ಅದಕ್ಕೆ ಸಂಬAಧಿಸಿದ ಹಾಲು ಸಂಸ್ಕರಣಾ ಕೇಂದ್ರ ಮತ್ತು ಮೇಕೆಗಳ ಸಾಕಾಣಿಕೆಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳ ಜೊತೆಗೆ ಕೇಂದ್ರದ ಯಂತ್ರೋಪಕರಣಗಳು, ಮೇಕೆಗಳ ಖರೀದಿ ವ್ಯವಸ್ಥೆ ಸೇರಿದಂತೆ ಇನ್ನೂ ಅನೇಕ ಕಾಮಗಾರಿಗಳು ನÀಡೆಯಬೇಕಾಗಿದೆ.

ಈ ಎಲ್ಲಾ ವಿಷಯಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿವೃದ್ಧಿ ಪಡಿಸುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಸರಕಾರದ ಹೊಸ ಯೋಜನೆ ಇದಾಗಿದ್ದು, ಇದಕ್ಕೆ ಸಂಬAಧಿಸಿದAತೆ ಪಶುಪಾಲನಾ ಇಲಾಖೆಯ ಮೂಲಕ ಮೊದಲ ಹಂತದ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿಯನ್ನು ಪಶುಪಾಲನಾ ಇಲಾಖೆಯಿಂದ ಕುರಿ ಮಂಡಳಿ ಅವರಿಗೆ ವಹಿಸಿ ಅದಕ್ಕೆ ಬೇಕಾಗುವ ಹಣವನ್ನು ಮಂಡಳಿಯ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಕುಶಾಲನಗರ ಪ.ಪಂ. ಅಧ್ಯಕ್ಷ ಜೈವರ್ಧನ್, ಕೂಡುಮಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್, ಮಂಜಯ್ಯ, ಕೂಡುಮಂಗಳೂರು ಶಕ್ತಿ ಕೇಂದ್ರದ ಅಧÀ್ಯಕ್ಷ ಪ್ರವೀಣ್, ಸಂಗೊಳ್ಳಿರಾಯಣ್ಣ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಪ್ರಭಾಕರ್, ಕುಶಾಲನಗರ ಮೂಡಾ ನಿರ್ದೇಶಕ ವೈಶಾಕ್, ಶಿವಕುಮಾರ್, ಪ್ರವೀಣ್, ಜಗದೀಶ್ ಸೇರಿದಂತೆ ಅನೇಕ ಮಂದಿ ಹಾಜರಿದ್ದರು.