ಕೂಡಿಗೆ, ನ. ೨೪: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಲ್ಲಿ ಈಗಾಗಲೇ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಈ ಭಾಗದ ಅನೇಕ ರೈತರು ಬೆಳೆದ ಹೈಬ್ರೀಡ್ ತಳಿಯ ಭತ್ತ ಬೆಳೆಯ ಕಟಾವು ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ವಾತಾವರಣದ ವೈಪರೀತ್ಯದಿಂದಾಗಿ ತುಂತುರು ಮಳೆ ಆರಂಭವಾಗಿರದರೂ ಸಹ ಅಕಾಲಿಕ ಮಳೆಯ ನಡುವೆಯೂ ಭತ್ತ ಬೆಳೆಯ ಕಟ್ಟಾವು ಆರಂಭಗೊAಡಿದೆ.
ಹಾರAಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಕೃಷಿ ಇಲಾಖೆಯ ಮೂಲಕ ಪರಿಷ್ಕರಿಸಿದ ಹೈಬ್ರೀಡ್ ತಳಿಯ ವಿವಿಧ ಬಗೆಯ ಭತ್ತದ ಬೀಜಗಳನ್ನು ಹಾಕಿ ಸಸಿ ಮಾಡಿಗಳನ್ನು ಮಾಡಿ ನಾಟಿ ಮಾಡಲಾಗಿತ್ತು. ಈ ಸಾಲಿನಲ್ಲಿ ವಾತಾವರಣಕ್ಕೆ ಅನುಗುಣವಾಗಿ ಮತ್ತು ಮಣ್ಣಿನ ಆದ್ಯತೆ ಮೇರೆಗೆ ಹೆಚ್ಚಿನ ರೈತರು ಸಣ್ಣ ಅಕ್ಕಿಯ ಭತ್ತ ಬೆಳೆಯನ್ನು ಬೆಳೆದಿರುತ್ತಾರೆ. ಬೆಳೆಯು ಉತ್ತಮವಾಗಿ ಬಂದಿದೆ. ಈ ಬೆಳೆ ಈಗಾಗಲೇ ಕಟ್ಟಾವಿಗೆ ಬಂದು ಒಂದು ವಾರಗಳೇ ಕಳೆದಿದೆ, ಮಳೆಯನ್ನು ನೋಡಿಕೊಂಡು ಕಟಾವು ಮಾಡುವ ಎಂದಿದ್ದ ರೈತರು ಮಳೆಯ ವಾತಾವರಣಕ್ಕೆ ಭತ್ತ ಬೆಳೆಯ ಕಾಳುಗದ್ದೆಗಳಲ್ಲಿ ಉದುರಲು ಆರಂಭವಾಗಿರುವುದರಿAದಾಗಿ ಅಕಾಲಿಕ ಮಳೆಯ ನಡುವೆಯೇ ಕುಯಿಲು ಆರಂಭಿಸಿದ್ದಾರೆ.
ಹಾರAಗಿ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಮದಲಾಪುರ ಕೂಡಿಗೆ ಭುವನಗಿರಿ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಸೇರಿದಂತೆ ಕೊಡಗಿನ ಗಡಿಭಾಗದವರೆಗೆ ಈಗಾಗಲೇ ಭತ್ತ ಬೆಳೆ ಕಟಾವಿಗೆ ಬಂದಿದೆ. ಆದರೆ ಈ ವ್ಯಾಪ್ತಿಯ ರೈತರು ಮುಖ್ಯವಾಗಿ ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ಭತ್ತದ ಹುಲ್ಲಿನ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ, ಅಕಾಲಿಕ ತುಂತುರು ಮಳೆ ಬಿದ್ದರೆ ಸಾಗು ಭತ್ತದ ಹುಲ್ಲು ಕಪ್ಪಾಗಿ ಹಸುಗಳು ತಿನ್ನುವುದಿಲ್ಲ. ಇದರಿಂದಾಗಿ ಭತ್ತದ ಜೊತೆಗೆ ಹುಲ್ಲು ಸಹ ಮುಖ್ಯವಾಗಿರುತ್ತದೆ. ಇದರಿಂದಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಪ್ರಗತಿಪರ ರೈತರಾದ ರಂಗಸ್ವಾಮಿ, ವಿಶ್ವನಾಥ, ಪುಟ್ಟರಾಜ, ಉದಯ, ರವಿಕುಮಾರ್ ಜವರೇಗೌಡ, ಸಣ್ಣಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ