ಸಿದ್ದಾಪುರ, ನ. ೨೪: ಮನೆಯ ಎದುರಿನಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾವೊಂದು ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದೆ. ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ನಿವಾಸಿ ಬಿನ್ನಿ ಅಗಸ್ಟೀನ್ ಎಂಬವರಿಗೆ ಸೇರಿದ ಆಟೋರಿಕ್ಷಾವನ್ನು (ಕೆಎ ೧೨ ಎ ೮೮೩೧) ಎಂದಿನAತೆ ಮನೆಯ ಎದುರಿನಲ್ಲಿ ನಿಲ್ಲಿಸಿದ್ದರು.
ಇಂದು ಬೆಳಗ್ಗಿನ ಜಾವ ೪.೪೫ರ ಸಮಯಕ್ಕೆ ದಿಢೀರನೆ ಶಬ್ಧ ಕೇಳಿ ಬಂದಿದೆ. ಮನೆಯ ಕೋಣೆಯಿಂದ ಹೊರಗಡೆ ಬೆನ್ನಿ ಅಗಸ್ಟೀನ್ ಬಂದು ನೋಡಿದಾಗ ಆಟೋರಿಕ್ಷಾವು ಬೆಂಕಿಗೆ ಸಿಲುಕಿ ಸಂಪೂರ್ಣ ಸುಟ್ಟು ಹೋಗಿತ್ತು. ತಾಂತ್ರಿಕ ದೋಷದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಟೋ ಮಾಲೀಕ ಬೆನ್ನಿ ಅಗಸ್ಟೀನ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಮುಖ್ಯಪೇದೆ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.