*ಗೋಣಿಕೊಪ್ಪ, ನ. ೨೪: ಚಳಿಗಾಲವಾದ್ದರಿಂದ ಮುಂಜಾನೆ ಮಂಜಿನಲ್ಲಿ ವಾಯುವಿಹಾರಕ್ಕೆ ತೆರಳುವಾಗ ಮತ್ತು ಪ್ರಯಾಣಿಸುವಾಗ ಹೆಚ್ಚು ಕಣ್ಣಿನಲ್ಲಿ ನೀರು ಬರುವ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದುದರಿಂದ ಕಣ್ಣಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಚಳಿಗಾಲದಲ್ಲಿ ಕಣ್ಣಿನಲ್ಲಿ ತೇವಾಂಶ ಉತ್ಪತ್ತಿಗೆ ಗಮನ ಹರಿಸಬೇಕು ಎಂದು ಲೋಪಮುದ್ರಾ ದೃಷ್ಟಿ ಆಸ್ಪತ್ರೆ ನೇತ್ರ ತಜ್ಞೆ ಡಾ. ಸೌಮ್ಯ ಗಣೇಶ್ ನಾಣಯ್ಯ ತಿಳಿಸಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ‘ಅರಿವು-ಉಳಿವು’ ಕಾರ್ಯಕ್ರಮದಲ್ಲಿ ಚಳಿಗಾಲದಲ್ಲಿ ಕಣ್ಣಿನ ರಕ್ಷಣೆ ಬಗ್ಗೆ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಣ್ಣಿಗೆ ಕಿರಿ ಕಿರಿ ಉಂಟಾದಾಗ ಹೆಚ್ಚು ಒತ್ತಡದಿಂದ ನೀರು ಹಾಕಿದಾಗ ಕಣ್ಣುಗುಡ್ಡೆಯ ಮೇಲ್ಪದರಕ್ಕೂ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೇಲ್ಪದರ ದೃಷ್ಟಿಗೆ ಮಾತ್ರವಲ್ಲದೆ, ಬ್ಯಾಕ್ಟಿರಿಯಾ, ದೂಳು, ಕಸ ಕಣ್ಣಿಗೆ ಘಾಸಿಗೊಳಿಸುವುದನ್ನು ತಡೆ ಮಾಡುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಚಳಿಗಾಲದ ಗಾಳಿಯಲ್ಲಿ ತೇವಾಂಶ ಕಡಿಮೆ ಇರುವುದರಿಂದ ಚರ್ಮ ಮತ್ತು ಕಣ್ಣುಗಳು ಪ್ರತಿಕೂಲ ಪರಿಣಾಮ ಎದುರಿಸುತ್ತವೆ. ಕಣ್ಣಿನಲ್ಲಿ ನೀರಿನಾಂಶ ಕಡಿಮೆಯಾಗಿ ಕಿರಿಕಿರಿ ಹೆಚ್ಚು ಅನುಭವಿಸುತ್ತೇವೆ. ಚಳಿಯಲ್ಲಿ ಆಲಸ್ಯ ಹೆಚ್ಚು. ಚಳಿಯಿಂದ ರಕ್ಷಿಸಿಕೊಳ್ಳಲು ಬಿಸಿಲಿನ ಶಾಖ, ಬೆಂಕಿ, ಹೀಟರ್ ಇಂತಹವುಗಳ ಅವಲಂಬನೆಗೆ ಮುಂದಾಗುತ್ತೇವೆ. ಇದು ಗಾಳಿಯಲ್ಲಿನ ತೇವಾಂಶ ಮತ್ತು ಕಣ್ಣಿನ ನೀರಿನಾಂಶದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವುದರಿಂದ ಕಣ್ಣುಗಳಲ್ಲಿ ನೀರಿನ ಅಂಶ ಬತ್ತಿಹೋಗಿ ಹೆಚ್ಚು ಕಿರಿಕಿರಿ, ಅಲರ್ಜಿ, ಕಣ್ಣಿನ ಬಣ್ಣ ಬದಲಾಗುವ ಸಮಸ್ಯೆ ಎದುರಿಸುವ ಪ್ರಕರಣ ಹೆಚ್ಚಾಗುತ್ತಿದೆ. ಅತಿಯಾಗಿ ಬಿಸಿ ದೇಹಕ್ಕೆ ತಾಗದಂತೆ ಕೂಡ ಮುಂಜಾಗೃತೆ ವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಣ್ಣು ಮಿಟುಕಿಸಿ: ಹೆಚ್ಚು ಮೊಬೈಲ್, ಕಂಪ್ಯೂಟರ್, ಎಲೆಕ್ಟಾçನಿಕ್ ಬಳಕೆ ಮಾಡುವವರು ಪ್ರತಿ ೨೦ ನಿಮಿಷಕೊಮ್ಮೆ ೨೦ ಬಾರಿ ಕಣ್ಣು ಮಿಟುಕಿಸುವುದರಿಂದ ಕಣ್ಣಿನಲ್ಲಿ ತೇವಾಂಶ ಉತ್ಪತ್ತಿಯಾಗುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಪ್ರತಿ ೨೦ ನಿಮಿಷಕೊಮ್ಮೆ ನಾವು ಕುಳಿತ ಜಾಗದಿಂದ ಎದ್ದು ಬಂದು ೨೦ ಅಡಿ ದೂರದ ಪ್ರದೇಶ, ಪ್ರಕೃತಿಯನ್ನು ಕಣ್ಣರಳಿಸಿ ನೋಡುವುದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಲಿದೆ. ಪ್ರಾಕೃತಿಕವಾಗಿ ಕಣ್ಣಿನ ಆರೈಕೆ ಮಾಡುವುದು ತುಂಬಾ ಒಳ್ಳೆಯದು ಎಂದರು.
ಮುAಜಾಗ್ರತಾ ಕ್ರಮಗಳು : ಮನೆಯ ಹೊರಗೆ ಕಣ್ಣಿಗೆ ಕನ್ನಡಿ ಹಾಕುವುದರಿಂದ ಗಾಳಿ, ಮಂಜು ಇಂತಹವುಗಳಿAದ ರಕ್ಷಿಸಿಕೊಳ್ಳಬಹುದಾಗಿದೆ. ಬಿಸಲಿನ ತಾಪವನ್ನು ತಗ್ಗಿಸುವ ಸನ್ ಗ್ಲಾಸ್ ಹೆಚ್ಚು ಪ್ರಯೋಜನಕಾರಿ. ದಿನಕ್ಕೆ ೬-೮ ಗ್ಲಾಸ್ ನೀರು ಸೇವನೆ, ಪ್ರಾಕೃತಿಕವಾಗಿ ನೀರಿನಾಂಶ ಹೆಚ್ಚು ನೀಡುವ ಆಹಾರ ಸೇವನೆ ಪ್ರಯೋಜನಕ್ಕೆ ಬರುತ್ತದೆ. ಎಣ್ಣೆ ಅಂಶ ಹೆಚ್ಚಿರುವ ಮೀನು, ಕಾಳು, ವಾಲ್ನಟ್, ಬಟರ್ ಫ್ರೂಟ್, ಆಹಾರ ಪದ್ದತಿ ಕಣ್ಣಿನ ಆರೋಗ್ಯಕ್ಕೆ ಪೂರಕವಾಗಲಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಪ್ರಮುಖರಾದ ಮಂಡೇಡ ಅಶೋಕ್, ವಿ. ವಿ. ಅರುಣ್ಕುಮಾರ್, ದರ್ಶನ್ ದೇವಯ್ಯ, ಜಗದೀಶ್ ಜೋಡುಬೀಟಿ, ಡಿ. ನಾಗೇಶ್, ಸಿಂಗಿ ಸತೀಶ್ ಇದ್ದರು.